Home » ಸಮುದ್ರದ ಅಲೆಗೆ ಸಿಲುಕಿದ ನಟ | ಈಜಲು ಹೋಗಿ ಮಾಡಿದ ಅವಾಂತರ

ಸಮುದ್ರದ ಅಲೆಗೆ ಸಿಲುಕಿದ ನಟ | ಈಜಲು ಹೋಗಿ ಮಾಡಿದ ಅವಾಂತರ

0 comments

ಮಳೆ ನೀರು ಎಂದರೆ ಇಷ್ಟ ಪಡದೆ ಇರುವವರೆ ವಿರಳ. ಅದರಲ್ಲೂ ಕೂಡ ವಿಶೇಷವಾಗಿ ಹೊಳೆ, ಜಲಪಾತ ಕಂಡಾಗ ಮೈದುಂಬಿ ಹರಿಯುವ ನೀರಿನ ಮಧ್ಯೆ ಮನಸ್ಸು ಕೂಡ ನಲಿದಾಡಿ ಈಜಲು ಪ್ರೇರೇಪಿಸುತ್ತದೆ.

ಈಜುವ ಸಂದರ್ಭ ಅಲ್ಲಿನ ವಾತಾವರಣ ಜೊತೆಗೆ ನೀರಿನ ಆಳದ ಅರಿವಿರುವುದು ಅವಶ್ಯ. ಕೆಲವೊಮ್ಮೆ ಎಂತಹ ಈಜುಗಾರನಾದರು ಕೂಡ ನಸೀಬು ಕೆಟ್ಟರೆ ನೀರಿನ ಸುಳಿಗೆ ಸಿಲುಕಿ ಪ್ರಾಣಪಕ್ಷಿ ಹಾರಿಹೋಗುವ ಪ್ರಮೇಯ ಎದುರಾದರೂ ಅಚ್ಚರಿಯಿಲ್ಲ.

ಕೆಲವೊಮ್ಮೆ ನಸೀಬು ಕೆಟ್ಟರೆ ಚಿಕ್ಕ ನಿರ್ಲಕ್ಷ್ಯದಿಂದ ಜೀವವೇ ಹೋಗಬಹುದು. ಅದೇ ರೀತಿ ನಸೀಬು ಚೆನ್ನಾಗಿದ್ದರೆ ಅಚ್ಚರಿಯ ರೀತಿಯಲ್ಲಿ ಬದುಕುಳಿದು ಬರಬಹುದು.

ಈಜಲು ಹೋಗಿದ್ದ ಯುವಕನೋರ್ವ ಸಮುದ್ರ ಅಲೆಗೆ ಸಿಲುಕಿದ ಘಟನೆ ನಡೆದಿದೆ. ಕುಮಟಾ ತಾಲೂಕಿನ ಗೋಕರ್ಣ ಕೊಡ್ಲೇ ಬೀಚ್​​ನಲ್ಲಿ ಹೈದರಾಬಾದ್ ಅಖಿಲ್ ರಾಜ್ ಎಂಬ ಯುವಕ ಈಜಲು ತೆರಳಿ ಅಲೆಗೆ ಸಿಲುಕಿದ್ದು, ಗೋಕರ್ಣ ಅಡ್ವೇಂಚರ್ ಸಿಬ್ಬಂದಿ ರಕ್ಷಣೆ ಮಾಡಿರುವಂತಹ ಘಟನೆ ನಡೆದಿದೆ.

ಅಖಿಲ್ ರಾಜ್ ಚಿತ್ರನಟ ಎಂದು ತಿಳಿದು ಬಂದಿದೆ. ಕೆಲವೊಮ್ಮೆ ಹರಸಾಹಸ ಮಾಡಲು ಹೋಗಿ ಜೀವಕ್ಕೆ ಕುತ್ತು ಬರುವ ಸಾಧ್ಯತೆ ಹೆಚ್ಚಿದ್ದು, ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವುದು ಶ್ರೇಯಸ್ಕರ.

You may also like

Leave a Comment