Home » Sherlyn Chopra: ನಟಿ ಶೆರ್ಲಿನ್ ಚೋಪ್ರಾಗೆ ಕಿಡ್ನಿ ಫೇಲ್- ಬದುಕೋದಿನ್ನು ಬರೀ ಮೂರು ತಿಂಗಳು !! ಅರೆ ಇದೇನಿದು ಶಾಕಿಂಗ್ ನ್ಯೂಸ್ ?

Sherlyn Chopra: ನಟಿ ಶೆರ್ಲಿನ್ ಚೋಪ್ರಾಗೆ ಕಿಡ್ನಿ ಫೇಲ್- ಬದುಕೋದಿನ್ನು ಬರೀ ಮೂರು ತಿಂಗಳು !! ಅರೆ ಇದೇನಿದು ಶಾಕಿಂಗ್ ನ್ಯೂಸ್ ?

0 comments

Sherlyn Chopra: ನಟನೆ ಜೊತೆಗೆ ಮಾಡೆಲಿಂಗ್ ಕ್ಷೇತ್ರದಲ್ಲಿಯೂ ಗುರುತಿಸಿಕೊಂಡಿರುವ ಶೆರ್ಲಿನ್ ಚೋಪ್ರಾ ಹೆಚ್ಚಾಗಿ ವಿವಾದಗಳಿಂದಲೇ ಸುದ್ದಿಯಲ್ಲಿರುತ್ತಾರೆ. ಬಾಲಿವುಡ್‌ನ (Bollywood) ಬೋಲ್ಡ್‌ ಬ್ಯೂಟಿ ಎಂದೇ ಕರೆಸಿಕೊಳ್ಳುವ ನಟಿ ಶೆರ್ಲಿನ್‌ ಚೋಪ್ರಾ (Actress Sherlyn Chopra) ಇದೀಗ ಮತ್ತೊಂದು ವಿಚಾರವಾಗಿ ಸಖತ್ ಸುದ್ದಿಯಾಗಿದ್ದಾರೆ.

ಶೆರ್ಲಿನ್ ಚೋಪ್ರಾ (Sherlyn Chopra) ಬಾಲಿವುಡ್‌ನ (Bollywood)ವಿವಾದಾತ್ಮಕ ನಟಿ. ಸೋಷಿಯಲ್ ಮೀಡಿಯಾದಲ್ಲಿ ಹಸಿಬಿಸಿ ಫೋಟೋ, ವಿಡಿಯೋ ಶೇರ್ ಮಾಡುತ್ತ ಸದಾ ಸುದ್ದಿಯಲ್ಲಿರುವ ನಟಿ. ಇತ್ತೀಚೆಗಷ್ಟೇ ಈಕೆ ಹಣಕ್ಕಾಗಿ ಹಲವು ಜನರೊಂದಿಗೆ ಮಲಗಿರುವುದಾಗಿ ಹೇಳಿಕೊಂಡಿದ್ದರು. ಈ ಬೆನ್ನಲ್ಲೇ ಇದೀಗ ನಟಿಯ ಬಗ್ಗೆ ಶಾಕಿಂಗ್ ಮಾಹಿತಿ ಲಭ್ಯವಾಗಿದೆ.

ಹೌದು, ಬಾಲಿವುಡ್ ಹಾಟ್ ಬ್ಯೂಟಿ ಶೆರ್ಲಿನ್ ಚೋಪ್ರಾಗೆ ಕಿಡ್ನಿ ಫೇಲ್ ಆಗಿದೆ ಎಂಬ ಮಾಹಿತಿ‌ ಲಭ್ಯವಾಗಿದೆ. ಈ ಬಗ್ಗೆ ನಟಿಯೇ ಮಾಹಿತಿ ನೀಡಿದ್ದಾರೆ. ತಾವು ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿದ್ದು, ವೈದ್ಯರು ತಮಗೆ ಮೂರು ತಿಂಗಳ ಗಡುವು ನೀಡಿದ್ದು, ಮೂರು ತಿಂಗಳಿನಲ್ಲಿ ನಟಿ ಸಾಯುವುದಾಗಿ ವೈದ್ಯರು ಹೇಳಿದ್ದನ್ನು ನಟಿ ಸ್ಮರಿಸಿಕೊಂಡಿದ್ದಾರೆ.

ಅಂದಹಾಗೇ ಈ ಘಟನೆ 2021 ರಲ್ಲಿ ನಡೆದಿರುವುದು. ಅದನ್ನು ಇದೀಗ ನಟಿ ನೆನಪಿಸಿಕೊಂಡಿದ್ದಾರೆ. ಅಂದು ನಟಿಯ ಒಂದು ಕಿಡ್ನಿ ಫೇಲ್​ ಆಗಿತ್ತು. ಅನಿವಾರ್ಯವಾಗಿ ಅದನ್ನು ತೆಗೆದು ಹಾಕಬೇಕಿತ್ತು. ವೈದ್ಯರು ಬದುಕುವ ಮೂರು ತಿಂಗಳ ಗಡುವು ನೀಡಿದ್ದರು. ಸತತ ಮೂರು ತಿಂಗಳ ಔಷಧಿಯ ನಂತರ ಮೂತ್ರಪಿಂಡದ ವೈಫಲ್ಯವು ವ್ಯತಿರಿಕ್ತವಾಯಿತು ಎಂದು ನಟಿ ಹೇಳಿದ್ದಾರೆ.

ಸದ್ಯ ನಟಿಯ ಹೇಳಿಕೆ ಭಾರೀ​ ವೈರಲ್​ ಆಗುತ್ತಿದೆ. ಅಭಿಮಾನಿಗಳಿಗಂತೂ ಒಂದು ಭಾರೀ ಶಾಕ್ ಉಂಟಾಗಿರೋದು ನಿಜಾನೇ. ಹಲವರು ಹಲವು ರೀತಿಯ ಕಾಮೆಂಟ್ ಹಾಕಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಇನ್ನೂ ಕೆಲವರು ಇದು ಆಗಿ ಹೋಗಿರುವ ವಿಚಾರ ಎಂದು ನಿಟ್ಟುಸಿರಿಟ್ಟಿದ್ದಾರೆ.

You may also like

Leave a Comment