Home » ತಿರುವು ಪಡೆದ ನಟಿ ತುನೀಶಾ ಸಾವಿನ ಪ್ರಕರಣ | ಲವ್ ಜಿಹಾದ್ ಗೆ ಬಲಿಯಾದ್ರಾ ನಟಿ !?

ತಿರುವು ಪಡೆದ ನಟಿ ತುನೀಶಾ ಸಾವಿನ ಪ್ರಕರಣ | ಲವ್ ಜಿಹಾದ್ ಗೆ ಬಲಿಯಾದ್ರಾ ನಟಿ !?

0 comments

ಇತ್ತೀಚೆಗೆ ಲವ್ ಜಿಹಾದ್ ಪ್ರಕರಣಗಳು ಹೆಚ್ಚಾಗಿದ್ದು, ದಿನೇ ದಿನೇ ಒಂದಲ್ಲ ಒಂದು ಇಂತಹ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇವೆ. ಇದೀಗ ಲವ್ ಜಿಹಾದ್ ಗಾಳಿ ಸಿನಿರಂಗಕ್ಕೂ ತಟ್ಟಿದ್ದು, ಇದೇ ನಟಿ ತುನೀಶಾಳ ಆತ್ಮಹತ್ಯೆಗೆ ಕಾರಣವಾಯಿತೇ ಎಂಬ ಶಂಕೆ ವ್ಯಕ್ತವಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಇದೀಗ ಪೊಲೀಸರು ನಟಿಯ ಸಹ-ನಟನಾದ ಶೀಜಾನ್ ಮೊಹಮ್ಮದ್ ಖಾನ್ ಅವರನ್ನು ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಆರೋಪದಡಿ ಬಂಧಿಸಿ, ಮುಂಬೈನ ವಸಾಯಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನಾಲ್ಕು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ.

ಘಟನೆಯ ವಿವರ: ನಟಿ ತುನೀಶಾ ಶರ್ಮಾ ಶೂಟಿಂಗ್ ಸೆಟ್‌ನಲ್ಲಿ ಚಹಾದ ವಿರಾಮದ ಬಳಿಕ ವಾಶ್‌ರೂಮ್‌ ಗೆ ತೆರಳಿದವರು ಎಷ್ಟು ಹೊತ್ತಾದರೂ ಹೊರಗೆ ಬಾರದ ಹಿನ್ನೆಲೆ ಸೆಟ್‌ನಲ್ಲಿದ್ದವರು ಬಾಗಿಲು ಒಡೆದು ಒಳಗೆ ಹೋಗಿದ್ದಾರೆ. ಈ ವೇಳೆ ನಟಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದ್ದು, ಎಲ್ಲರನ್ನೂ ಬೆಚ್ಚಿಬೀಳಿಸಿದೆ. ಅಲ್ಲದೆ, ನಟಿ ನಾಯಕ ನಟನ ಮೇಕಪ್ ರೂಮ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ವರದಿಯಾಗಿದೆ.

ನಟಿ ತುನೀಶಾಗೆ ತನ್ನ ಸಹನಟ ಶೀಜನ್ ಖಾನ್‌ನೊಂದಿಗೆ ಒಡನಾಟವಿದ್ದು, ನಂತರ ಈ ಸ್ನೇಹ ಪ್ರೀತಿಗೆ ತಿರುಗಿದ್ದು, ಆತ್ಮಹತ್ಯೆಗಿಂತ ಕೆಲ ದಿನಗಳ ಮುನ್ನ ಇವರಿಬ್ಬರ ಸಂಬಂಧ ಮುರಿದುಬಿತ್ತು. ಇದರಿಂದ ನಟಿ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ಮಾಹಿತಿ‌ ಲಭ್ಯವಾಗಿದೆ.

ಇನ್ನೂ, ಈ ಪ್ರಕರಣ ಲವ್ ಜಿಹಾದ್ ಗೆ ಸಂಬಂಧಪಟ್ಟಿದೆಯೇ ಎಂಬ ಶಂಕೆ ವ್ಯಕ್ತವಾಗಿದ್ದು, ಇದೀಗ ಈ ಪ್ರಕರಣವನ್ನು ಲವ್ ಜಿಹಾದ್ ಕೋನದಲ್ಲೂ ತನಿಖೆ ನಡೆಸಲಾಗುವುದು. ಇದರ ಹಿಂದೆ ಯಾರ ಕೈವಾಡವಿದೆ ಎಂಬುದನ್ನು ಪತ್ತೆಹಚ್ಚುತ್ತೇವೆ ಎಂದು ಬಿಜೆಪಿ ನಾಯಕ ರಾಮ್ ಕದಂ ಹೇಳಿದ್ದಾರೆ.

You may also like

Leave a Comment