

ಬೆಂಗಳೂರು: ವಾರಾಂತ್ಯದ ರಜೆ ಹಾಗೂ ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಕೆಎಸ್ ಆರ್‌ಟಿಸಿಯು ಬೆಂಗಳೂರಿನಿಂದ ರಾಜ್ಯದ ನಾನಾ ಪ್ರದೇಶಗಳಿಗೆ ಜ.23 ರಿಂದ 25ರವರೆಗೆ ಹೆಚ್ಚುವರಿ ಬಸ್‌ಗಳನ್ನು ಕಾರ್ಯಾಚರಣೆಗೊಳಿಸುತ್ತಿದೆ.
ಕೆಂಪೇಗೌಡ ಬಸ್ ನಿಲ್ದಾಣದಿಂದ ಜ.23ರಂದು ರಾತ್ರಿ 8ರ ನಂತರ ಹಾಸನ, ಅರಕಲಗೂಡು, ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ, ತುರುವೇಕೆರೆ,
ತುಮಕೂರು, ಹೊಸದುರ್ಗ, ಪಾವಗಡ, ಚಿತ್ರದುರ್ಗ, ಚಳ್ಳಕೆರೆ, ಹೊಸಪೇಟೆ, ಬಳ್ಳಾರಿ, ರಾಯಚೂರು, ಧರ್ಮಸ್ಥಳ, ಗದಗ, ಹಾವೇರಿ, ಹುಬ್ಬಳ್ಳಿಗೆ 265 ಬಸ್, ಜ.24ರಂದು 500 ಬಸ್ ಗಳನ್ನು ಓಡಿಸಲು ತೀರ್ಮಾನಿಸಲಾಗಿದೆ.
ಅದೇ ರೀತಿ ಮೈಸೂರು ರಸ್ತೆಯ ಬಸ್‌ನಿಲ್ದಾಣದಿಂದ ಸ್ಯಾಟಲೈಟ್ ಜ.23, 24 ಹಾಗೂ ಜ.25ರಂದು 180 ಬಸ್‌ಗಳು ಕಾರ್ಯಾಚರಣೆಗೊಳ್ಳಲಿವೆ













