Home » Sullia: ಅಡ್ಕಾರು ಶ್ರೀ ವಯನಾಟ್ ಕುಲವನ್ ದೈವಸ್ಥಾನದ ಜೇರ್ಣೋದ್ಧಾರದ ಪ್ರಯುಕ್ತ ಮುಹೂರ್ತ ಕುಟ್ಟಿ ಹಾಕುವ ಕಾರ್ಯಕ್ರಮ

Sullia: ಅಡ್ಕಾರು ಶ್ರೀ ವಯನಾಟ್ ಕುಲವನ್ ದೈವಸ್ಥಾನದ ಜೇರ್ಣೋದ್ಧಾರದ ಪ್ರಯುಕ್ತ ಮುಹೂರ್ತ ಕುಟ್ಟಿ ಹಾಕುವ ಕಾರ್ಯಕ್ರಮ

by ಕಾವ್ಯ ವಾಣಿ
0 comments

Sullia: ಸುಳ್ಯ( Sullia) ಜಾಲ್ಸುರು ಗ್ರಾಮದ ಅಡ್ಕಾರಿನ ಶ್ರೀ ವಯನಾಟ್ ಕುಲವನ್ ದೈವಸ್ಥಾನದ ಜೀರ್ಣೋದ್ಧಾರದ ಪ್ರಯುಕ್ತ ಮುಹೂರ್ತ ಕುಟ್ಟಿ ಹಾಕುವ ಕಾರ್ಯಕ್ರಮವು ಫೆ.25ರಂದು ಬೆಳಿಗ್ಗೆ ನಡೆಯಿತು.

ಅಡೂರು ಪದಿಕ್ಕಾಲಡ್ಕ ಶ್ರೀ ಐವರ್ ಮಹಾವಿಷ್ಣು ತಂಬುರಾಟಿ ಕ್ಷೇತ್ರದ ಸ್ಥಾನಿಕರಾದ ಕುಮಾರನ್ ಕಾರ್ನೋಚ್ಚನ್‌ ಹಾಗೂ ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಮೊಕೇಸರರಾದ ಗುರುರಾಜ್ ಭಟ್ ಅವರುಗಳ ನೇತೃತ್ವದಲ್ಲಿ, ಮುಳ್ಳೇರಿಯಾದ ಪ್ರಭಾಕರನ್‌ ಶಿಲ್ಪಿ ಯವರು ಈ ಕಾರ್ಯಕ್ರಮ ನೆರವೇರಿಸಿದರು. ಜೊತೆಗೆ ನಾರಾಯಣ ಬಾರ್ಪಣೆ ಮತ್ತು ಮನು ಪದವು ಅವರು ಮುಹೂರ್ತದ ಕಲ್ಲು ಇಟ್ಟರು.

ಈ ಸಂದರ್ಭದಲ್ಲಿ ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಅರ್ಚಕರಾದ ಶ್ರೀವರ ಪಾಂಗಣ್ಣಾಯ, ದೇವಸ್ಥಾನದ ವ್ಯವಸ್ಥಪನಾ ಸಮಿತಿ ಅಧ್ಯಕ್ಷ ಹರಿಪ್ರಕಾಶ್ ಅಡ್ಕಾರು ಮತ್ತು ಸದಸ್ಯರುಗಳು, ಉತ್ಸವ ಸಮಿತಿಯ ಅಧ್ಯಕ್ಷ ಗಣೇಶ್ ರೈ ಕುಕ್ಕಂದೂರು ಹಾಗೂ ಪದಾದಿಕಾರಿಗಳು ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಸುಧಾಕರ ಕಾಮತ್ ಹಾಗೂ ಪದಾಧಿಕಾರಿಗಳು, ಪರಿವಾರ ದೈವಗಳ ಜೀರ್ಣೋದ್ಧಾರ ಸಮಿತಿ ಕಾರ್ಯಾದ್ಯಕ್ಷ ಮೋಹನ ನಂಗಾರು, ಪ್ರಧಾನ ಕಾರ್ಯದರ್ಶಿ ಭಾಸ್ಕರ ಅಡ್ಕಾರು ಬೀರಮಂಗಲ, ಹಾಗೂ ಸಮಿತಿಯ ಪದಾಧಿಕಾರಿಗಳು ಸದಸ್ಯರು ಹಾಗೂ ಹಲವಾರು ಗಣ್ಯರು ಭಗವದ್ಭಕ್ತರು ಉಪಸ್ಥಿತರಿದ್ದರು.

You may also like