Home » ಅಫ್ಘಾನಿಸ್ತಾನದಲ್ಲಿ ಕಂಪಿಸಿದ ಭೂಮಿ | ಅಫ್ಘಾನ್ ಪ್ರಜೆಗಳ ಸ್ಥಿತಿ ಈಗ ಗಾಯದ ಮೇಲೆ ಬರೆ ಎರೆದಂತಾಗಿದೆ !

ಅಫ್ಘಾನಿಸ್ತಾನದಲ್ಲಿ ಕಂಪಿಸಿದ ಭೂಮಿ | ಅಫ್ಘಾನ್ ಪ್ರಜೆಗಳ ಸ್ಥಿತಿ ಈಗ ಗಾಯದ ಮೇಲೆ ಬರೆ ಎರೆದಂತಾಗಿದೆ !

by ಹೊಸಕನ್ನಡ
0 comments

ತಾಲಿಬಾನ್ ದಾಳಿಯಿಂದ ತತ್ತರಿಸಿರುವ ಅಫ್ಘಾನಿಸ್ತಾನಕ್ಕೆ ಗಾಯದ ಮೇಲೆ ಬರೆ ಎನ್ನುವಂತೆ ಮತ್ತೊಂದು ಆಘಾತ ಉಂಟಾಗಿದೆ. ಅದೇನೆಂದರೆ ಅಫ್ಘಾನಿಸ್ತಾನದಲ್ಲಿ ಇಂದು ಮುಂಜಾನೆ ಭೂಮಿ ಕಂಪಿಸಿದೆ.

ಉಗ್ರರ ಹಿಡಿತಕ್ಕೆ ಸಿಲುಕಿದಾಗಲೇ ಆಫ್ಘಾನಿಸ್ತಾನದ ಸೇನಾ ವಿಮಾನ ಪತನವಾಗಿತ್ತು. ಇಂದು ಬೆಳಗಿನ ಜಾವ ಆಫ್ಘಾನಿಸ್ತಾನದ ಫೈಜಾಬಾದ್ ಆಗ್ನೇಯ ಪ್ರದೇಶದಲ್ಲಿ 5.0 ತೀವ್ರತೆಯ ಭೂಕಂಪ ಸಂಭವಿಸಿದೆ.

ಬೆಳಗ್ಗೆ 6.08ಕ್ಕೆ ಭೂಮಿ ಕಂಪಿಸಿದ್ದು, ಜನರು ಭಯಭೀತರಾಗಿದ್ದಾರೆ ಎಂದು ನ್ಯಾಷನಲ್ ಸೆಂಟರ್ ಫಾರ್ ಸೀಸ್ಕೊಲಾಜಿ ವರದಿ ತಿಳಿಸಿದೆ. ಹಾಗೆಯೇ ಭೂಕಂಪನದಿಂದ ಆಗಿರುವ ನಷ್ಟಗಳ ಬಗ್ಗೆ ಇದುವರೆಗೂ ಯಾವುದೇ ಸುದ್ದಿ ವರದಿಯಾಗಿಲ್ಲ.

ಇದಕ್ಕೂ ಮೊದಲು ಅಂದರೆ ಆಗಸ್ಟ್ 15 ರಂದೇ ಆಫ್ಘಾನಿಸ್ತಾನ ಮತ್ತು ಕಜಕಿಸ್ತಾನ ಭಾಗದಲ್ಲಿ 5.1 ತೀವ್ರತೆಯ ಭೂಕಂಪ ಸಂಭವಿಸಿತ್ತು. ಹೀಗೆ ಪದೇ ಪದೇ ಭೂಕಂಪನ ಉಂಟಾಗುತ್ತಿರುವುದರಿಂದ ಜನರು ತಾಲಿಬಾನಿಗಳಿಗೆ ಮಾತ್ರವಲ್ಲ, ಪ್ರಕೃತಿ ವಿಕೋಪಕ್ಕೂ ಹೆದರುವಂತಾಗಿದೆ.

You may also like

Leave a Comment