Actor Allu Arjun: ಸಂಧ್ಯಾ ಥಿಯೇಟರ್ ಕಾಲ್ತುಳಿತ ಪ್ರಕರಣದಲ್ಲಿ ಅಲ್ಲು ಅರ್ಜುನ್ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ನಿನ್ನೆ ಪೊಲೀಸರು ನಟನನ್ನು ಬಂಧಿಸಿ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ನಂತರ ತೆಲಂಗಾಣ ನ್ಯಾಯಾಲಯ ಅಲ್ಲು ಅರ್ಜುನ್‌ಗೆ ಜಾಮೀನು ನೀಡಿತ್ತು. ಇದರ ಹೊರತಾಗಿಯೂ, ನಟ ಜೈಲಿನಲ್ಲಿ ರಾತ್ರಿ ಕಳೆಯಬೇಕಾಯಿತು. ಆದರೆ ಇವತ್ತು ಬೆಳಗ್ಗೆ ಜೈಲಿನಿಂದ ಹೊರಬಂದಿದ್ದಾರೆ.
ನಾಂಪಲ್ಲಿ ಕೋರ್ಟ್ ಅಲ್ಲು ಅರ್ಜುನ್ ಅವರನ್ನು 14 ದಿನಗಳ ಕಾಲ ರಿಮಾಂಡ್ ಗೆ ಕಳುಹಿಸಿತ್ತು. ಬಳಿಕ ನಿನ್ನೆ ಚಂಚಲಗೂಡ ಕೇಂದ್ರ ಕಾರಾಗೃಹಕ್ಕೆ ಕರೆದೊಯ್ಯಲಾಯಿತು. ನಂತರ, ನಟನಿಗೆ ತೆಲಂಗಾಣ ಹೈಕೋರ್ಟ್ 50,000 ರೂಪಾಯಿಗಳ ವೈಯಕ್ತಿಕ ಬಾಂಡ್‌ನಲ್ಲಿ ಮಧ್ಯಂತರ ಜಾಮೀನು ನೀಡಿದೆ.
ಅಲ್ಲು ಅರ್ಜುನ್ ಗೆ ನಾಲ್ಕು ವಾರಗಳ ಕಾಲ ಜಾಮೀನು ನೀಡಲಾಗಿದೆ. ಅಲ್ಲು ಅರ್ಜುನ್ ತನ್ನ ತಂದೆ ಅಲ್ಲು ಅರವಿಂದ್ ಜೊತೆ ಜೈಲಿನಿಂದ ಹೊರಟು ಹೋಗುತ್ತಿದ್ದ ದೃಶ್ಯಗಳು ವೈರಲ್ ಆಗಿದೆ. ಜೈಲಿನಿಂದ ಹೊರಬಂದ ತಕ್ಷಣ ನಟ ಗೀತಾ ಆರ್ಟ್ಸ್ ಪ್ರೊಡಕ್ಷನ್ ಹೌಸ್ ತಲುಪಿದ್ದಾರೆ.
ಅಲ್ಲು ಅರ್ಜುನ್ ಬಂಧನದ ನಂತರ, ನಿನ್ನೆ (ಡಿಸೆಂಬರ್ 13) ಅವರಿಗೆ ಜಾಮೀನು ನೀಡಲಾಯಿತು. ಆದರೆ ಅಲ್ಲು ಅರ್ಜುನ್ ಜೈಲಿನಿಂದ ಮನೆಗೆ ಮರಳಲು ಸಾಧ್ಯವಾಗಲಿಲ್ಲ. ಮಾಹಿತಿ ಪ್ರಕಾರ, ತಾಂತ್ರಿಕ ಸಮಸ್ಯೆಗಳಿಂದ ಅಲ್ಲು ಅರ್ಜುನ್ ಬಿಡುಗಡೆಯ ಆದೇಶ ಜೈಲು ತಲುಪಲು ಸಾಧ್ಯವಾಗಲಿಲ್ಲ. ಹಾಗಾಗಿ ನಟ ಒಂದು ರಾತ್ರಿ ಜೈಲಿನಲ್ಲಿ ಕಳೆಯಬೇಕಾಯಿತು.
