Home » Lok Sabha session: ಕೆಲಸದ ನಂತ್ರ ಕರೆ, ಇಮೇಲ್‌ ಬಂದ್‌

Lok Sabha session: ಕೆಲಸದ ನಂತ್ರ ಕರೆ, ಇಮೇಲ್‌ ಬಂದ್‌

0 comments

Sabha session: ಆಫೀಸ್‌ (Office) ಕೆಲಸದ ಬಳಿಕವೂ ಉದ್ಯೋಗಿಗಳು ಕರೆ, ಇಮೇಲ್‌ಗಳಿಗೆ ಹಾಜರಾಗುವುದನ್ನು ತಡೆಯಲು ಅವಕಾಶ ನೀಡುವ ರೈಟ್‌ ಟು ಡಿಸ್‌ಕನೆಕ್ಟ್‌ ಬಿಲ್‌(Right to Disconnect Bill) ಲೋಕಸಭೆಯಲ್ಲಿ ಮಂಡನೆಯಾಗಿದೆ.

ಎನ್‌ಸಿಪಿ ಸಂಸದೆ ಸುಪ್ರಿಯಾ ಸುಳೆ (NCP MP Supriya Sule) ಅವರು ಈ ಖಾಸಗಿ ಮಸೂದೆಯನ್ನು (Private Bill) ಮಂಡಿಸಿದ್ದಾರೆ. ಅಧಿಕೃತ ಕೆಲಸದ ಅವಧಿ ಮೀರಿ ಮತ್ತು ರಜಾದಿನಗಳಲ್ಲಿ ಕೆಲಸಕ್ಕೆ ಸಂಬಂಧಿಸಿದ ಕರೆಗಳು ಮತ್ತು ಇಮೇಲ್‌ಗಳಿಂದ ಸಂಪರ್ಕ ಕಡಿತಗೊಳಿಸುವ ಹಕ್ಕನ್ನು ಪ್ರತಿ ಉದ್ಯೋಗಿಗೆ ಈ ಮಸೂದೆ ನೀಡುತ್ತದೆ.

ಇದರ ಜೊತೆ ನೌಕರರ ಕಲ್ಯಾಣ ಪ್ರಾಧಿಕಾರವನ್ನು ಸ್ಥಾಪಿಸಬೇಕೆಂಬ ಅಂಶ ಈ ಮಸೂದೆಯಲ್ಲಿದೆ. ಸರ್ಕಾರ ಈ ಮಸೂದೆಯನ್ನು ಅಂಗೀಕರಿಸುವ ಸಾಧ್ಯತೆ ಬಹಳ ಕಡಿಮೆಯಿದೆ. ಹೆಚ್ಚಿನ ಸಂದರ್ಭಗಳಲ್ಲಿ ಸರ್ಕಾರವು ಪ್ರಸ್ತಾವಿತ ಮಸೂದೆಗೆ ಪ್ರತಿಕ್ರಿಯಿಸಿದ ನಂತರ ಖಾಸಗಿ ಸದಸ್ಯರ ಮಸೂದೆಗಳನ್ನು ಹಿಂಪಡೆಯಲಾಗುತ್ತದೆ.ಸಚಿವರಲ್ಲದ ಸಂಸತ್ ಸದಸ್ಯರು ಮಂಡಿಸುವ ಮಸೂದೆ ಇದಾಗಿದ್ದನ್ನು ಇದನ್ನು ಸರ್ಕಾರೇತರ ಮಸೂದೆ ಎಂದು ಕರೆಯುತ್ತಾರೆ. ಇದು ಸಾರ್ವಜನಿಕ ಮಸೂದೆಯ (Public Bill) ವಿರುದ್ಧವಾಗಿದ್ದು, ಇದು ಒಬ್ಬ ವ್ಯಕ್ತಿ, ಗುಂಪು ಅಥವಾ ಪ್ರದೇಶದ ಮೇಲೆ ಪರಿಣಾಮ ಬೀರುವ ಕಾನೂನಿನ ಪ್ರಸ್ತಾವನೆಯಾಗಿರುತ್ತದೆ. ಸಂಸತ್ತಿನ ಖಾಸಗಿ ಸದಸ್ಯರು ಮಂಡಿಸುವ ಈ ಮಸೂದೆಯನ್ನು ಅಂಗೀಕರಿಸುವ ಪ್ರಕ್ರಿಯೆಯಲ್ಲಿ ಸರ್ಕಾರಿ ಮಸೂದೆಯಂತೆಯೇ ಅಂಗೀಕರಿಸಬೇಕಾಗುತ್ತದೆ.

You may also like