ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವತಿಯಿಂದ ಕೆಎಸ್‌ಡಿಎಲ್ ಮತ್ತು ಕೃಷಿ ಮಾರಾಟ ಇಲಾಖೆಯ ವಿವಿಧ ಹುದ್ದೆಗಳಿಗೆ ಜ.10 ಮತ್ತು 12 ರ ಬದಲಿಗೆ ಜನವರಿ 18 ರಂದು ಪರೀಕ್ಷೆ ನಡೆಸಲು ತೀರ್ಮಾನ ಮಾಡಲಾಗಿದೆ.
ಕೆಲವು ತಾಂತ್ರಿಕ ಕಾರಣಗಳಿಂದಾಗಿ ಪರೀಕ್ಷಾ ದಿನಾಂಕಗಳನ್ನು ಬದಲಾವಣೆ ಮಾಡಲಾಗಿದೆ. ಹೆಚ್ಚಿನ ವಿವರಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್‌ಸೈಟ್ ನೋಡಲು ಕೋರಲಾಗಿದೆ.
ಪರೀಕ್ಷಾ ಕೇಂದ್ರದಲ್ಲಿ Frisking ಮತ್ತು ಮುಖಚಹರೆ ಪರಿಶೀಲಿಸಿ ಪ್ರದೇಶ ನೀಡುವುದರಿಂದ ಎರಡು ಗಂಟೆ ಮುಂಚಿತವಾಗಿ ಪರೀಕ್ಷಾ ಕೇಂದ್ರದೊಳಗೆ ಹಾಜರಿರತಕ್ಕದ್ದು.
ಋಣಾತ್ಮಕ ಮೌಲ್ಯಮಾಪನವಿದ್ದು, ಪ್ರತಿ ತಪ್ಪು ಉತ್ತರಕ್ಕೆ 1/4 ಅಂಕಗಳನ್ನು ಕಡಿತ ಮಾಡಲಾಗುವುದು.
ಉತ್ತರಿಸದೇ ಇರುವ ಪ್ರಶ್ನೆಗಳಿಗೆ ಐದನೇ ಆಯ್ಕೆ/ವೃತ್ತವನ್ನು ರೇಡ್ ಮಾಡಲು ಕೊನೆಯ ಬೆಲ್ ಆದ ನಂತರ ಹೆಚ್ಚುವರಿಯಾಗಿ ಐದು ನಿಮಿಷಗಳನ್ನು ನೀಡಲಾಗುವುದು. ಯಾವುದೇ ಆಯ್ಕೆಯನ್ನು/ವೃತ್ತವನ್ನು ಶೇಡ್ ಮಾಡಿಲ್ಲದಿದ್ದರೆ, ಪ್ರಶ್ನೆಗೆ 1/4 ಅಂಕಗಳನ್ನು ಕಡಿತಮಾಡಲಾಗುತ್ತದೆ. ದೂರವಾಣಿ : 080-23564583
