Home » Viral Video: ಅಹಮದಾಬಾದ್ ವಿಮಾನ ದುರಂತ – ಹೊತ್ತಿ ಉರಿಯುತ್ತಿದ್ದ ವಿಮಾನದಿಂದ ನಡೆದುಕೊಂಡು ಹೊರ ಬಂದ ವ್ಯಕ್ತಿ – ಮತ್ತೊಂದು ವಿಡಿಯೋ ವೈರಲ್‌

Viral Video: ಅಹಮದಾಬಾದ್ ವಿಮಾನ ದುರಂತ – ಹೊತ್ತಿ ಉರಿಯುತ್ತಿದ್ದ ವಿಮಾನದಿಂದ ನಡೆದುಕೊಂಡು ಹೊರ ಬಂದ ವ್ಯಕ್ತಿ – ಮತ್ತೊಂದು ವಿಡಿಯೋ ವೈರಲ್‌

by V R
0 comments

Viral Video: ಗುಜರಾತ್​​ನ ಅಹ್ಮದಾಬಾದ್​​ನಲ್ಲಿ ಏರ್ ಇಂಡಿಯಾದ ವಿಮಾನ ಅಪಘಾತಕ್ಕೊಳಗಾಗಿ 242 ಮಂದಿ ಬಲಿಯಾಗಿದ್ದಾರೆ. ಇದು ದೇಶದ ಅತಿ ದೊಡ್ಡ ವಿಮಾನ ದುರಂತಗಳಲ್ಲಿ ಒಂದಾಗಿದೆ. ಅದೃಷ್ಟ ಎಂಬಂತೆ ಪ್ರಯಾಣಿಕರ ಪೈಕಿ ಒಬ್ಬನೇ ಒಬ್ಬ ವ್ಯಕ್ತಿ ಬದುಕುಳಿದಿದ್ದಾರೆ. ಈಗಾಗಲೇ ಈ ವಿಮಾನ ದುರಂತದ ಭಯಾನಕ ವಿಡಿಯೋಗಳು ವೈರಲ್ ಆಗಿವೆ. ಇದರ ನಡುವೆಯೇ ಬೆಂಕಿ ಹತ್ತಿ ಉರಿಯುತ್ತಿದ್ದ ವಿಮಾನದಿಂದ ಏಕೈಕ ವ್ಯಕ್ತಿ ನಡೆದುಕೊಂಡು ಬರುತ್ತಿರುವ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಹೌದು, ಅಹಮದಾಬಾದ್‌ನಲ್ಲಿ ನಡೆದ ಏರ್ ಇಂಡಿಯಾ-171 (Viral Video) ವಿಮಾನ ಅಪಘಾತದಲ್ಲಿ ಬದುಕುಳಿದ ಏಕೈಕ ವ್ಯಕ್ತಿ ವಿಶ್ವಶ್‌ಕುಮಾರ್ ರಮೇಶ್, ಅಪಘಾತ ಸ್ಥಳದಿಂದ (Air India) ಹೊರಬರುತ್ತಿರುವುದನ್ನು ತೋರಿಸುವ ಹೊಸ ವೀಡಿಯೊವೊಂದು ವೈರಲ್‌ ಆಗಿದೆ.

ಅವರು ಕ್ಯಾಂಪಸ್‌ನಿಂದ ಹೊರಗೆ ಹೋಗುತ್ತಿದ್ದಾಗ, ಕಿರುಚುತ್ತಿದ್ದ ಸ್ಥಳೀಯರು ಅವರನ್ನು ಆಸ್ಪತ್ರೆಗೆ ಸಾಗಿಸುತ್ತಿರುವುದು ಕಂಡುಬರುತ್ತದೆ. ಅಂದಹಾಗೆ ವಿಮಾನದ 11A ಸೀಟಿನಲ್ಲಿ – ತುರ್ತು ನಿರ್ಗಮನದ ಪಕ್ಕದಲ್ಲಿ ಕುಳಿತಿದ್ದ ರಮೇಶ್, ತನ್ನ ಜೀವವನ್ನು ಉಳಿಸಿಕೊಳ್ಳಲು ಸಕಾಲದಲ್ಲಿ ವಿಮಾನದಿಂದ ಜಿಗಿಯುವಲ್ಲಿ ಯಶಸ್ವಿಯಾದರು.

ಇನ್ನು ಆ ವಿಡಿಯೋದಲ್ಲಿ ಅವರು ಗುಜರಾತಿ ಭಾಷೆಯಲ್ಲಿ “ಪ್ಲೇನ್ ಫತ್ಯೋ ಚೆ” (ವಿಮಾನ ಸ್ಫೋಟಗೊಂಡಿದೆ) ಎಂದು ಕಿರುಚುತ್ತಿರುವುದನ್ನು ಕಾಣಬಹುದು.

ಇದನ್ನೂ ಓದಿ:Body Fitness: ಭಾರತೀಯ ವ್ಯಾಯಾಮ ವಿಧಾನ ಉತ್ತಮವೇ? ಇಲ್ಲಾ ಪಾಶ್ಚಿಮಾತ್ಯ ಜಿಮ್ ಒಳ್ಳೆದಾ?

You may also like