Home » Air India: ಡಿಸ್ಚಾರ್ಜ್ ಆಗ್ತಿದ್ದಂತೆ ಏರ್ ಇಂಡಿಯಾಗೆ ಶಾಕ್ ನೀಡಿದ ಅಹಮದಾಬಾದ್ ವಿಮಾನ ದುರಂತದಲ್ಲಿ ಬದುಕುಳಿದ ವ್ಯಕ್ತಿ

Air India: ಡಿಸ್ಚಾರ್ಜ್ ಆಗ್ತಿದ್ದಂತೆ ಏರ್ ಇಂಡಿಯಾಗೆ ಶಾಕ್ ನೀಡಿದ ಅಹಮದಾಬಾದ್ ವಿಮಾನ ದುರಂತದಲ್ಲಿ ಬದುಕುಳಿದ ವ್ಯಕ್ತಿ

0 comments

Air India : ಅಹಮದಾಬಾದ್ ವಿಮಾನ ದುರಂತದಲ್ಲಿ ಬದುಕುಳಿದಿದ್ದ ಏಕೈಕ ವ್ಯಕ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಇದೀಗ ಡಿಸ್ಚಾರ್ಜ್ ಆಗಿದ್ದಾರೆ. ಡಿಸ್ಚಾರ್ಜ್ ಆಗುತ್ತಿದ್ದಂತೆ ಈತ ಏರ್ ಇಂಡಿಯಾ ಗೆ ಶಾಕ್ ನೀಡಿದ್ದಾನೆ.

Mysore: ರೂ.1280 ಕಟ್ಟಿಲ್ಲ ಎಂದು 7 ವರ್ಷದ ಹೆಣ್ಣುಮಗುವನ್ನು ಹೊತ್ತೊಯ್ದ ಫೈನಾನ್ಸ್‌ ಸಿಬ್ಬಂದಿ

ಹೌದು, ಜೂನ್ 12ರ ಗುರುವಾರ ಸಂಭವಿಸಿದ್ರೆ ಏರ್ ಇಂಡಿಯಾ ವಿಮಾನಪತನದಲ್ಲಿ ಬದುಕುಳಿದ ಏಕೈಕ ಪ್ರಯಾಣಿಕ ವಿಶ್ವಾಸ್ ಕುಮಾರ್ ರಮೇಶ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ವಿಶ್ವಾಸ್ ಕುಮಾರ್ ರಮೇಶ್ ಜೊತೆಯಲ್ಲಿ ಪ್ರಯಾಣಿಸುತ್ತಿದ್ದ ಅವರ ಸೋದರ ಅಜಯ್ ಶವವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಈ ಬೆನ್ನಲ್ಲೇ ಏರ್ ಇಂಡಿಯಾ ನೀಡಿದ ಕೆಲವು ಪ್ರಸ್ತಾಪಗಳನ್ನು ಇವರ ಕುಟುಂಬ ತಿರಸ್ಕರಿಸುವ ಮೂಲಕ ಏರ್ ಇಂಡಿಯಾಗೆ ಅಘಾತ ನೀಡಿದೆ.

Flight Mileage: ವಿಮಾನದ ಮೈಲೇಜ್ ಎಷ್ಟು ಗೊತ್ತಾ ? – ‘ಎಷ್ಟು ಕೊಡುತ್ತೆ ‘ ಎಂದು ವಿಚಾರಿಸುವ ಭಾರತೀಯರಿಗಾಗಿ ಈ ಪೋಸ್ಟ್ !

ವಿಶ್ವಾಸ್ ಕುಮಾರ್ ರಮೇಶ್ ಉರಿಯುತ್ತಿರುವ ವಿಮಾನದಿಂದ ಹೊರಬರುವಲ್ಲಿ ಯಶಸ್ವಿಯಾಗಿದ್ದಾರೆ. ವಿಮಾನ ಪತನದ ಬಳಿಕ ಆಸ್ಪತ್ರೆಗೆ ದಾಖಲಾದ ಎರಡನೇ ರೋಗಿಯಾಗಿದ್ದಾರೆ. ಆಸ್ಪತ್ರೆಯಿಂದಲೇ ಡಿಯುನಲ್ಲಿರುವ ಮನೆಗೆ ತೆರಳಲು ಎಲ್ಲಾ ವ್ಯವಸ್ಥೆಯನ್ನು ಮಾಡಿಕೊಡಲಾಗಿದೆ. ವಿಮಾನಯಾನ ಸಂಸ್ಥೆ ಏರ್ ಇಂಡಿಯಾ, ವಿಶ್ವಾಸ್ ಮತ್ತು ಅವರ ಕುಟುಂಬಕ್ಕೆ ಇಲ್ಲಿ ಹೋಟೆಲ್ ವಸತಿ ವ್ಯವಸ್ಥೆ ಮಾಡಲು ಮುಂದಾಗಿತ್ತು. ಆದರೆ ವಿಶ್ವಾಸ್ ಅವರ ಕುಟುಂಬವು ಏರ್ ಇಂಡಿಯಾದ ಪ್ರಸ್ತಾಪವನ್ನು ತಿರಸ್ಕರಿಸಿತ್ತು. ಅವರು ತಮ್ಮದೇ ಆದ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದಾರೆ ಎಂದು ಡಾ. ರಾಕೇಶ್ ಜೋಶಿ ಹೇಳಿದರು.ಈ ಮೂಲಕ ಏರ್ ಇಂಡಿಯಾದ ವಿರುದ್ಧ ತಮ್ಮ ಆಕ್ರೋಶವನ್ನು ಅವರು ತೋರಿಸಿದ್ದಾರೆ.

ಏರ್ ಇಂಡಿಯಾದ 11-ಜೆ ಸೀಟ್‌ನಲ್ಲಿ ಕುಳಿತಿದ್ದ ವಿಶ್ವಾಸ್ ರಮೇಶ್ ಕುಮಾರ್ ನ ಸೋದರ ಅಜಯ್ ಕೂಡಾ ಅದೇ ವಿಮಾನದಲ್ಲಿದ್ದು ಮೃತರಾಗಿದ್ದರು. ಇದೀಗ ಡಿಎನ್ಎ ಪರೀಕ್ಷೆ ಬಳಿಕ ಅಜಯ್ ಶವವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಅಜಯ್ ಅವರ ಅಂತಿಮ ವಿಧಿವಿಧಾನಗಳನ್ನು ಪೂರೈಸಲು ಶವವನ್ನು ಡಿಯುವಿಗೆ ತೆಗೆದುಕೊಂಡು ಹೋಗಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ವಿಶ್ವಾಸ್ ರಮೇಶ್ ಕುಮಾರ್ ಸಹ ಡಿಯುಗೆ ಹಿಂದಿರುಗಿದ್ದಾರೆ.

ವಿಶ್ವದ ಅತ್ಯಂತ ಸುರಕ್ಷಿತ ವಿಮಾನ ಯಾವುದು? ರಿಲೀಸ್ ಆಗೇ ಬಿಟ್ಟ ಪಟ್ಟಿ

Air India: 100 ಪ್ರಯಾಣಿಕರಿದ್ದ ಏರ್‌ಇಂಡಿಯಾ ವಿಮಾನಕ್ಕೆ ಪಕ್ಷಿ ಡಿಕ್ಕಿ

You may also like