Plane Crash : ಲಂಡನ್ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಅಹಮದಾಬಾದ್ನಲ್ಲಿ ಪತನದ ಅತಿದೊಡ್ಡ ಮಾಹಿತಿಯೊಂದು ಬೆಳಕಿಗೆ ಬಂದಿದೆ. ವಿಮಾನ ಅಪಘಾತಕ್ಕೂ ಮುನ್ನ ಪೈಲಟ್ ಎಟಿಸಿಗೆ ಕಳುಹಿಸಿದ್ದ ಸಂದೇಶ ಏನು ಎಂದು ತಿಳಿದು ಬಂದಿದೆ. ಪೈಲಟ್ ಸುಮಿತ್ ಸಭರ್ವಾಲ್ ‘ಮೇಡೇ’ ಸಂದೇಶ ಮಾತ್ರವಲ್ಲದೆ ಇನ್ನೂ ಕೆಲವು ವಿಚಾರಗಳನ್ನು ಹೇಳಿದ್ದರು ಎಂಬುದು ಆಡಿಯೋ ಸಂದೇಶದಿಂದ ಗೊತ್ತಾಗಿದೆ.
ಹೌದು, ಪತನಗೊಂಡ AI 171 ವಿಮಾನದ ಪೈಲಟ್ ಸುಮೀತ್ ಸಭರ್ವಾಲ್ ಅವರು, ವಿಮಾನವು ಮಧ್ಯಾಹ್ನ 1.39ಕ್ಕೆ ಅಹಮದಾಬಾದ್ ವಿಮಾನ ನಿಲ್ದಾಣದ ರನ್‌ವೇ 23ರಿಂದ ಹೊರಟಿತು. ವಿಮಾನ ಟೆಕ್ ಆಫ್ ಆಗುತ್ತಿದ್ದಂತೆ ಪೈಲಟ್ ಹತ್ತಿರದ ATC ಗೆ ಸಂದೇಶ ಕಳುಹಿಸಿದ್ದರು. ಆದರೆ ನಂತರ ವಿಮಾನ ATC ಗೆ ಯಾವುದೇ ಸಿಗ್ನಲ್ ಸಿಗಲಿಲ್ಲ. ವಿಮಾನ ಟೇಕ್ ಆಫ್ ಆದ ಕೆಲವು ಸೆಕೆಂಡುಗಳ ನಂತರ ಅಪಘಾತಕ್ಕೀಡಾಯಿತು.
ಅಲ್ಲದೆ ಪೈಲಟ್ ಸುಮಿತ್ ಸಭರ್ವಾಲ್ ಅವರ ಕೊನೆಯ ಮಾತುಗಳು, “ಅಂದರೆ, ಮೇಡೇ… ಮೇಡೇ… ಮೇಡೇ… ವಿದ್ಯುತ್ ಪೂರೈಕೆ ಕಡಿಮೆಯಾಗುತ್ತಿದೆ, ವಿಮಾನ ಟೇಕ್ ಆಫ್ ಆಗುತ್ತಿಲ್ಲ, ನಾವು ಬದುಕುಳಿಯುವುದಿಲ್ಲ’ ಎಂದು ಹೇಳಿದ್ದರು. ಆದರೆ ಎಟಿಸಿ ಮಾಡಿದ ಕರೆಗಳಿಗೆ ಪ್ರತಿಕ್ರಿಯಿಸಲಿಲ್ಲ. ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ವಿಮಾನವು ಏರ್ಪೋರ್ಟ್ ಬಳಿಯ ವೈದ್ಯಕೀಯ ಕಾಲೇಜು ಕಟ್ಟಡಕ್ಕೆ ಅಪ್ಪಳಿಸಿತು. ಸಧ್ಯ ಪೈಲಟ್ ಸುಮಿತ್ ಸಭರ್ವಾಲ್ ಅವರ ಕೊನೆಯ 4 ಸೆಕೆಂಡುಗಳ ಆಡಿಯೋ ಕ್ಲಿಪ್ ವೈರಲ್ ಆಗಿದೆ.
