Home » CET Exam: ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ನಕಲಿ ಅಭ್ಯರ್ಥಿ ಪತ್ತೆ ಹಚ್ಚಿದ ಎಐ!

CET Exam: ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ನಕಲಿ ಅಭ್ಯರ್ಥಿ ಪತ್ತೆ ಹಚ್ಚಿದ ಎಐ!

0 comments
CET Exam 2024

AI Detects Fake Candidate: ಯುಜಿಸಿಇಟಿ-2025 ಎರಡನೇ ದಿನ ಪರೀಕ್ಷೆ ಬರೆಯಲು ಬಂದ ನಕಲಿ ಅಭ್ಯರ್ಥಿಯನ್ನು ಕ್ಯೂಆರ್‌ ಕೋಡ್‌ ಆಧಾರಿತ ಮುಖ ಚಹರೆ ಪತ್ತೆ ಹಚ್ಚು ಆಪ್‌ ಗುರುತಿಸಿದ್ದು, ಈ ಕುರಿತು ತನಿಖೆ ಮಾಡಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಆದೇಶ ಮಾಡಿದೆ.

ಮಲ್ಲೇಶ್ವರಂನ 7ನೇ ಅಡ್ಡರಸ್ತೆಯ ಸಿಲ್ವರ್‌ ವ್ಯಾಲಿ ಪಬ್ಲಿಕ್‌ ಪಿಯು ಕಾಲೇಜಿನಲ್ಲಿ ನಕಲಿ ಸಿಇಟಿ ಅಭ್ಯರ್ಥಿಯನ್ನು ಎಐ ಪತ್ತೆ ಹಚ್ಚಿದೆ. ತುಬಾ ಫಾತೀಮಾ ಜಮೀಲ್‌ ಎಂಬಾಕೆ ಗಣಿತ ವಿಷಯದ ಕುರಿತು ಪರೀಕ್ಷೆ ಬರೆಯಲು ಗುರುವಾರ ಬಂದಿದ್ದು, ನಂತರ ಶೌಚಾಲಯಕ್ಕೆ ಹೋಗಿದ್ದು, ಎಷ್ಟೇ ಹೊತ್ತಾದರೂ ಹೊರಗೆ ಬಂದಿರಲಿಲ್ಲ.

ಇನ್ನೇನು ಪರೀಕ್ಷೆ ಆರಂಭ ಆಗಬೇಕು ಎನ್ನುವಾಗ ಹೊರ ಬಂದ ಈಕೆ ಕ್ಯೂಆರ್‌ಕೋಡ್‌ ಇರುವ ಪ್ರವೇಶಪತ್ರ ತೋರಿಸಿ ಒಳಗೆ ಹೋಗಲು ಪ್ರಯತ್ನ ಪಟ್ಟಿದ್ದಾರೆ. ಆದರೆ ಆಕೆಯ ಮುಖ ಚಹರೆ ಭಾವಚಿತ್ರ ತೆಗೆದಾಗ ಅಭ್ಯರ್ಥಿ ನಕಲಿ ಎಂದು ತಿಳಿದು ಬಂದಿದೆ. ಪ್ರಾಂಶುಪಾಲರಿಗೆ ತಿಳಿಸಬೇಕು ಎನ್ನುವಾಗ ಆಕೆ ಅಷ್ಟರಲ್ಲಿ ಅಲ್ಲಿಂದ ಓಡಿ ಹೋಗಿದ್ದಾಳೆ.

You may also like