New Delhi: ದೆಹಲಿ ವಿಮಾನ ನಿಲ್ದಾಣದಲ್ಲಿ 82 ವರ್ಷದ ಮಹಿಳೆಯೋರ್ವಳಿಗೆ ವೀಲ್‌ಚೇರ್ ಕೊಡಲು ಏರ್‌ಪೋರ್ಟ್ ಸಿಬ್ಬಂದಿ ನಿರಾಕರಣ ಮಾಡಿದ ಕಾರಣ ವೃದ್ಧೆ ಕುಸಿದು ಬಿದ್ದು, ಐಸಿಯುಗೆ ದಾಖಲಾಗಿರುವ ಘಟನೆ ನಡೆದಿದೆ.
ಮೊದಲೇ ಬುಕ್ ಮಾಡಿದ ವೀಲ್ ಚೇರನ್ನು ಕೊಡಲು ಸಿಬ್ಬಂದಿ ನಿರಾಕರಣೆ ಮಾಡಿದ್ದರಿಂದ ವೃದ್ಧೆ ಮೂರು ಪಾರ್ಕಿಂಗ್ ಲೇನ್‌ಗಳನ್ನು ದಾಟಿ ಕೌಂಟರ್ ಬಳಿಗೆ ಬಂದಾಗ ದಿಢೀರ್ ಕುಸಿದು ಬಿದ್ದ ಪರಿಣಾಮ ತುಟಿ, ತಲೆ ಮತ್ತು ಮೂಗಿಗೆ ಗಾಯಗಳಾಗಿ ರಕ್ತಸ್ರಾವವಾಗಿದೆ.
ವೃದ್ಧೆಯ ಮೆದುಳಿನಲ್ಲಿ ರಕ್ತಸ್ರಾವವಾಗುವ ಸಾಧ್ಯತೆ ಇರುವುದರಿಂದ ಅವರನ್ನು ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿರುವುದಾಗಿ ಮೊಮ್ಮಗಳು ಹೇಳಿಕೆ ನೀಡಿದ್ದಾರೆ. ಈ ಕುರಿತು ಮೊಮ್ಮಗಳು ಸಾಮಾಜಿಕ ಜಾಲತಾಣದಲ್ಲಿ ವಿಮಾನದ ಸಿಬ್ಬಂದಿಗಳ ವಿರುದ್ದ ಅಸಮಾಧಾನ ಹೊರಹಾಕಿದ್ದಾರೆ. ಘಟನೆಯ ಕುರಿತು ಡಿಜಿಸಿಎ ಮತ್ತು ಏರ್ ಇಂಡಿಯಾದಲ್ಲಿ ದೂರನ್ನು ದಾಖಲು ಮಾಡಿದ್ದಾರೆ.
