Home » ಅಕ್ಕನ ಇಚ್ಛೆಗೆ ವಿರುದ್ಧವಾಗಿ ಮದುವೆಯಾದ ತಂಗಿ | ಬೇಸತ್ತ ಅಕ್ಕ ತವರು ಮನೆಯಲ್ಲೇ ಆತ್ಮಹತ್ಯೆಗೆ ಶರಣು !!

ಅಕ್ಕನ ಇಚ್ಛೆಗೆ ವಿರುದ್ಧವಾಗಿ ಮದುವೆಯಾದ ತಂಗಿ | ಬೇಸತ್ತ ಅಕ್ಕ ತವರು ಮನೆಯಲ್ಲೇ ಆತ್ಮಹತ್ಯೆಗೆ ಶರಣು !!

0 comments

ಮೈಸೂರು: ಅಕ್ಕನಿಗೆ ಇಷ್ಟವಿಲ್ಲದ ಸಂಬಂಧದ ಜೊತೆಗೆ ತಂಗಿ ಮದುವೆಯಾಗಿದ್ದಕ್ಕೆ ಬೇಸತ್ತು ಅಕ್ಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಶ್ರೀರಾಂಪುರದಲ್ಲಿ ನಡೆದಿದೆ.

ಲಕ್ಷ್ಮೀ (34) ಎಂಬುವವರು ಮೃತಪಟ್ಟ ಮಹಿಳೆ.

ದೂರದ ಊರಿಗೆ ತಂಗಿಯನ್ನು ಕೊಟ್ಟು ಮದುವೆ ಮಾಡದಂತೆ ಲಕ್ಷ್ಮೀ ವಿರೋಧಿಸಿದ್ದರು. ತನ್ನ ವಿರೋಧದ ನಡುವೆಯೂ ತಂಗಿ ಮದುವೆ ಆದ ಕಾರಣಕ್ಕೆ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾರೆ.

ಅಕ್ಕನ ವಿರೋಧದ ನಡುವೆ ತಂಗಿಯ ಮದುವೆಯನ್ನು ಪೋಷಕರು ಮಾಡಿದ್ದಾರೆ. ತಂಗಿ ಮದುವೆಯಾದ ಎರಡೇ ದಿನಕ್ಕೆ ಅಕ್ಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ತಂಗಿ ಬಿಂದುಳನ್ನು ಚಿಕ್ಕಮಗಳೂರಿನ ಕೊಪ್ಪಗೆ ಎರಡು ದಿನಗಳ ಹಿಂದೆ ಮದುವೆ ಮಾಡಿಕೊಡಲಾಗಿತ್ತು. ದೂರದ ಊರಿಗೆ ತಂಗಿಯನ್ನು ಕೊಟ್ಟು ವಿವಾಹ ಮಾಡಲು ಅಕ್ಕ ಲಕ್ಷ್ಮೀಯ ವಿರೋಧವಿತ್ತು. ಶ್ರೀನಿವಾಸ್ ಎಂಬವರನ್ನು 12 ವರ್ಷಗಳ ಹಿಂದೆ ಲಕ್ಷ್ಮೀ ಮದುವೆಯಾಗಿದ್ದರು. ನಾಲ್ಕು ವರ್ಷಗಳಿಂದ ಲಕ್ಷ್ಮೀ ತವರು ಮನೆಯಲ್ಲೇ ಇದ್ದರು. ಈ ವೇಳೆ ದೂರದ ಊರಿಗೆ ತಂಗಿ ಬಿಂದು ಸಂಬಂಧ ನಿಶ್ಚಯಿಸಲಾಗಿತ್ತು. ಅದನ್ನು ಲಕ್ಷ್ಮೀ ವಿರೋಧಿಸಿದ್ದರು.

ಅಕ್ಕ ಲಕ್ಷ್ಮೀಯ ವಿರೋಧದ ನಡುವೆ ತಂಗಿ ಬಿಂದು ಮದುವೆ ಮಾಡಲಾಗಿತ್ತು. ಸೆಪ್ಟೆಂಬರ್ 16 ರಂದು ತಂಗಿ ಬಿಂದುಳ ಮದುವೆ ನಡೆದಿತ್ತು.ಇದರಿಂದ ಬೇಸತ್ತು ತವರು ಮನೆಯಲ್ಲೇ ಲಕ್ಷ್ಮೀ ನೇಣಿಗೆ ಶರಣಾಗಿದ್ದಾರೆ. ಈ ಸಂಬಂಧ ಮೈಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

You may also like

Leave a Comment