

ಅಳದಂಗಡಿ: ಸುಂಕದ ಕಟ್ಟೆ ಶ್ರೀ ಮಹಾಗಣಪತಿ ದೇವಸ್ಥಾನದ ಮೂರನೇ ಪ್ರತಿಷ್ಠಾ ವರ್ಧಂತಿ ಫೆ. 7ರಂದು ನಡೆಯಲಿದೆ. ವರ್ಧಂತ್ಯುತ್ಸವದ ಆಮಂತ್ರಣ ಪತ್ರಿಕೆಯನ್ನು ಬೆಳ್ತಂಗಡಿ ಬೆಸ್ಟ್ ಫೌಂಡೇಶನ್ ಇದರ ಅಧ್ಯಕ್ಷ ರಕ್ಷಿತ್ ಶಿವರಾಂ ಜ. 23 ರಂದು ದೇವಳದಲ್ಲಿ ಬಿಡುಗಡೆಗೊಳಿಸಿ ಸಲಹೆ, ಸೂಚನೆಗಳನ್ನು ನೀಡಿದರು.
ಅಳದಂಗಡಿ ಸತ್ಯದೇವತೆ ದೈವಸ್ಥಾನದ ಆಡಳೆದಾರ ಶಿವಪ್ರಸಾದ ಅಜಿಲ, ಶ್ರೀ ಮಹಾಗಣಪತಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ| ಶಶಿಧರ ಡೋಂಗ್ರೇ, ಜಾತ್ರೋತ್ಸವ ಸಮಿತಿ ಅಧ್ಯಕ್ಷ ಸತೀಶ್ ಪೂಜಾರಿ ನಮನ, ಸದಸ್ಯರಾದ ದೀಪಕ್ ಎಚ್.ಡಿ. ಬಳಂಜ, ಸದಾನಂದ ತೋಟದಪಲ್ಕೆ,ಜಿನ್ನಪ್ಪ ಶೆಟ್ಟಿಕೆದ್ದು, ಅರ್ಚಕ ಪ್ರವೀಣ ಮಯ್ಯ, ಸ್ಥಳೀಯರಾದ ಸುಭಾಶ್ಚಂದ್ರ ರೈ, ಸಂಜೀವ ಪೂಜಾರಿ ಕೊಡಂಗೆ, ಆನಂದ ನೀರಲ್ಕೆ, ದೇವಿಪ್ರಸಾದ ಶೆಟ್ಟಿ, ವಸಂತಿ ಪೂಜಾರಿ, ಮತ್ತಿತರರು ಉಪಸ್ಥಿತರಿದ್ದರು.













