Home » ಕರ್ನಾಟಕದ ಮದ್ಯ ಮಳಿಗೆಯಲ್ಲಿ ಆಗಲಿದೆ ಮಹತ್ತರ ಬದಲಾವಣೆ!! | ಅಬಕಾರಿ ಇಲಾಖೆಯ ಹೊಸ ಆದೇಶ ಪ್ರಕಟಕ್ಕೆ ಕ್ಷಣಗಣನೆ-ಮದ್ಯ ಪ್ರಿಯರಲ್ಲಿ ಸಂತಸ

ಕರ್ನಾಟಕದ ಮದ್ಯ ಮಳಿಗೆಯಲ್ಲಿ ಆಗಲಿದೆ ಮಹತ್ತರ ಬದಲಾವಣೆ!! | ಅಬಕಾರಿ ಇಲಾಖೆಯ ಹೊಸ ಆದೇಶ ಪ್ರಕಟಕ್ಕೆ ಕ್ಷಣಗಣನೆ-ಮದ್ಯ ಪ್ರಿಯರಲ್ಲಿ ಸಂತಸ

0 comments

ಅಬಕಾರಿ ಇಲಾಖೆ ಹೊರಡಿಸಿದ್ದ ಹೊಸ ಆದೇಶವೊಂದು ಜಾರಿಗೊಳ್ಳಲಿದೆ ಎನ್ನುವ ಮಾಹಿತಿಯೊಂದು ಎಲ್ಲೆಡೆ ಹರಿದಾಡಿದ್ದು, ಮದ್ಯ ಪ್ರಿಯರನ್ನು ಖುಷಿಯ ಕಡಲಲ್ಲಿ ತೇಲಿಸಿದಂತಾಗಿದೆ.ಅಬಕಾರಿ ಕಾಯಿದೆಯ ತಿದ್ದುಪಡಿಯಲ್ಲಿ ಕೆ.ಎಸ್.ಬಿ.ಸಿ.ಎಲ್ ಡಿಪೋಗಳಲ್ಲಿ ಮಾತ್ರವಲ್ಲದೆ ಇತರ ಮದ್ಯ ಮಾರಾಟ ಮಳಿಗೆಯಲ್ಲೂ ಯಾವುದೇ ನಿರ್ಬಂಧನೆ ಇಲ್ಲದೆ ಮದ್ಯ ಖರೀದಿಸಲು ಅವಕಾಶ ಸಿಗುವ ಎಲ್ಲಾ ಲಕ್ಷಣಗಳು ಕಂಡು ಬಂದಿದೆ.

ಕಳೆದ ಏಪ್ರಿಲ್ ನಲ್ಲಿ ಈ ಬಗ್ಗೆ ಚರ್ಚಿಸಿ ಕ್ರಮ ಕೈಗೊಳ್ಳಲು ಸಮಿತಿಯೊಂದು ತಲೆ ಎತ್ತಿದ್ದು, ಸಮಾಲೋಚನೆ ನಡೆಸಿದಾಗ ಮಾರಾಟಗಾರರ ಒಕ್ಕೂಟ ಆಕ್ಷೇಪ ವ್ಯಕ್ತಪಡಿಸದ ಹಿನ್ನೆಲೆಯಲ್ಲಿ ಶೀಘ್ರವೇ ಆದೇಶವನ್ನು ಜಾರಿಗೊಳಿಸಿ ಪ್ರಕಟಿಸಲಾಗುವುದು ಎಂದು ಅಬಕಾರಿ ಹಿರಿಯ ಅಧಿಕಾರಿಗಳು ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ.

ಯಾಕೆ ಈ ಬದಲಾವಣೆ!?
ಈ ಮೊದಲು ಸಿಎಲ್-5 ಸನ್ನದುದಾರರು ಕರ್ನಾಟಕ ರಾಜ್ಯ ಪಾನೀಯ ನಿಗಮಕ್ಕೆ ಒಳಪಟ್ಟ ಡಿಪೋಗಳಿಂದ ಮಾತ್ರ ನಿಗದಿತ ಸಮಯದಲ್ಲಿ ಲಭ್ಯವಿರುವ ಮಾಲ್ ನ್ನು ಖರೀದಿಸಲು ಅವಕಾಶವಿತ್ತು.ಅಲ್ಲಿರುವ ಲಭ್ಯ ಮದ್ಯಗಳಿಗೆ ಮಾತ್ರ ಬ್ಯಾಂಕ್ ಟ್ರಾನ್ಸ್ಫರ್ ಮೂಲಕ ಹಣ ಪಾವತಿಸಿ ಕೊಂಡುಕೊಳ್ಳಬೇಕಿತ್ತು.

ಈ ಸಮಯದಲ್ಲಿ ಅಗತ್ಯವಿರುವ ಬ್ರಾಂಡ್ ಗಳು ಸಿಗದೇ ಸನ್ನದುದಾರರು ಬರೀಗೈಯ್ಯಲ್ಲೇ ಮರಳುತ್ತಾರೆ ಎನ್ನುವ ಕೂಗೂ ಕೇಳಿ ಬಂದಿತ್ತು. ಇದೆಲ್ಲದರಿಂದ ಮದ್ಯ ಖರೀದಿಯಲ್ಲಿ ಬದಲಾವಣೆ ತರಲು ಚಿಂತನೆ ನಡೆದಿದ್ದು, ಶೇ.70 ರಷ್ಟು ಎಲ್ಲವೂ ಓಕೆ ಆಗಿದೆ. ಇನ್ನೇನಿದ್ದರೂ ಆದೇಶ ಪ್ರಕಟವಾಗಲು ಬಾಕಿ ಇದೆ ಎನ್ನುವ ಸುದ್ದಿ ಹಬ್ಬಿದೆ.

You may also like

Leave a Comment