Home » Alia Bhatt: 77 ಲಕ್ಷ ವಂಚನೆ ಪ್ರಕರಣ: ಆಲಿಯಾ ಭಟ್‌ ಮಾಜಿ ಆಪ್ತ ಕಾರ್ಯದರ್ಶಿ ಬೆಂಗಳೂರಿನಲ್ಲಿ ಬಂಧನ

Alia Bhatt: 77 ಲಕ್ಷ ವಂಚನೆ ಪ್ರಕರಣ: ಆಲಿಯಾ ಭಟ್‌ ಮಾಜಿ ಆಪ್ತ ಕಾರ್ಯದರ್ಶಿ ಬೆಂಗಳೂರಿನಲ್ಲಿ ಬಂಧನ

by V R
0 comments

Alia Bhatt: ನಟನೊಬ್ಬನಿಗೆ 77 ಲಕ್ಷ ರೂ.ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಾಲಿವುಡ್‌ ನಟಿ ಆಲಿಯಾ ಭಟ್‌ ಮಾಜಿ ಆಪ್ತ ಕಾರ್ಯದರ್ಶಿಯನ್ನು ಜುಹು ಪೊಲೀಸರು ಬೆಂಗಳೂರಿನಲ್ಲಿ ಬಂಧನ ಮಾಡಿದ್ದಾರೆ.

ವೇದಿಕಾ ಪ್ರಕಾಶ್‌ ಶೆಟ್ಟಿ (32) ಬಂಧಿತ ಆರೋಪಿ. ಭಟ್‌ ನಿರ್ಮಾಣ ಸಂಸ್ಥೆ ಎಟರ್ನಲ್ ಸನ್‌ಶೈನ್ ಪ್ರೊಡಕ್ಷನ್ಸ್ ಪ್ರೈವೇಟ್ ಲಿಮಿಟೆಡ್‌ ಖಾತೆ ಹಾಗೂ ನಟಿಯ ಖಾತೆಯಿಂದ ಸುಮಾರು 76.9 ಲಕ್ಷ ರೂ. ಹಣ ವಂಚಿಸಿದ ಆರೋಪ ವೇದಿಕಾ ಮೇಲೆ ಇದೆ. 2022ರ ಮೇ ಮತ್ತು 2024ರ ಆಗಸ್ಟ್‌ ತಿಂಗಳ ನಡುವೆ ಈ ವಂಚನೆ ಮಾಡಲಾಗಿದೆ ಎನ್ನಲಾಗಿದೆ.

ಕಳೆದ ಜನವರಿ 23 ರಂದು ಆಲಿಯಾ ಭಟ್‌ ತಾಯಿ ಜುಹು ಪೊಲೀಸರಿಗೆ ದೂರು ನೀಡಿದಾಗ ಈ ಘಟನೆ ಬೆಳಕಿಗೆ ಬಂದಿದೆ. 2021 ರಿಂದ 2024 ರವರೆಗೆ ಆಲಿಯಾಭಟ್‌ ಅವರ ಆಪ್ತ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದಳು. ಈ ವೇಳೆ ಈಕೆ ನಟಿಯ ಹಣಕಾಸಿನ ದಾಖಲೆಗಳನ್ನು ನೋಡಿಕೊಳ್ಳುತ್ತಿದ್ದಳು. ಈ ಸಮಯದಲ್ಲಿ ನಕಲಿ ಹಣಕಾಸಿನ ಬಿಲ್‌ಗಳನ್ನು ತಯಾರು ಮಾಡಿ ಆಲಿಯಾ ಭಟ್‌ ಸಹಿ ಮಾಡಿಸಿ ಹಣ ವಂಚನೆ ಮಾಡಿದ್ದಾಳೆ.

ಆಲಿಯಾ ಭಟ್‌ ಅವರ ತಾಯಿ ದೂರು ನೀಡಿದ ನಂತರ ವೇದಿಕಾ ಎಸ್ಕೇಪ್‌ ಆಗಿ ಸ್ಥಳ ಬದಲಾವಣೆ ಮಾಡುತ್ತಿದ್ದಳು. ಖಚಿತ ಮಾಹಿತಿಯನ್ನು ಪಡೆದ ಪೊಲೀಸರು ಇದೀಗ ಈಕೆಯನ್ನು ಬೆಂಗಳೂರಿನಲ್ಲಿ ಬಂಧನ ಮಾಡಿ, ಮುಂಬೈಗೆ ಕರೆತಂದಿದ್ದಾರೆ.

 

ಇದನ್ನೂ ಓದಿ: Amith Shah: ರಾಜಕೀಯದಿಂದ ನಿವೃತ್ತಿ ಹೊಂದಿದ ನಂತರ ಅಮಿತ್ ಶಾ ಏನು ಮಾಡುತ್ತಾರೆ? 

You may also like