13
ಕೇಂದ್ರ ಸರಕಾರವು ಸಂಘಟಿತ ಸಾಮಾಜಿಕ ಭದ್ರತಾ ವ್ಯಾಪ್ತಿಗೆ ಹೆಚ್ಚು ಸಂಖ್ಯೆಯ ಕಾರ್ಮಿಕರನ್ನು ಭವಿಷ್ಯ ನಿಧಿ ಸಂಸ್ಥೆಯಡಿ ಸೇರಿಸಲು ದಾಖಲಾತಿ ಅಭಿಯಾನ ಆರಂಭಿಸಿದ್ದು, 2026ರ ಏ. 30ರವರೆಗೆ ನಡೆಯಲಿದೆ. ವಿವಿಧ ಸಂಸ್ಥೆಗಳಲ್ಲಿ ಹೊಸದಾಗಿ ಸೇರುವ ನೌಕರರನ್ನು ಸ್ವಯಂಪ್ರೇರಿತವಾಗಿ ಘೋಷಿಸಿ ಪಿಎಫ್‌ಗೆ ಸೇರಿಸುವಂತೆ ಪ್ರೋತ್ಸಾಹಿಸಲಾಗುತ್ತಿದೆ.
ನಿಯೋಜಕ ಸಂಸ್ಥೆಗಳು 2017ರ ಜುಲೈ 1ರಿಂದ 2025ರ ಅಕ್ಟೋಬರ್ ನಡುವೆ ಸೇರಿದವರು, ಘೋಷಣೆ ಮಾಡುವೆ ಸಂಸ್ಥೆಯಲ್ಲಿ ಕೆಲಸಕ್ಕೆ ಜೀವಿತರಾಗಿದ್ದು, ದಿನಾಂಕಕ್ಕೆ ಸೇವೆಯಲ್ಲಿರುವವರು, ಹಿಂದಿನ ಅವಧಿ ಯಲ್ಲಿ ಇಪಿಎಫ್‌ಗೆ ಸೇರಿಸಲಾಗ ದವರನ್ನು 100 ರೂ. ನಾಮಮಾತ್ರದ ಈ ದಂಡ ಪಾವತಿಸಿ ಸೇರಿಸಬಹುದು ಎಂದು ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತರ ಕಚೇರಿಯ ಪ್ರಕಟಣೆ ತಿಳಿಸಿದೆ.
