Renukaswamy Murder Case: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದಿರುವ ನಟ ದರ್ಶನ್‌ಗೆ ಇದೀಗ ಐಟಿ ಇಲಾಖೆಯ ಸಂಕಟ ಎದುರಾಗಿದೆ. 40 ಲಕ್ಷ ರೂಪಾಯಿ ಹಣ ಸೀಜ್ ಮಾಡಿರುವ ಹಿನ್ನೆಲೆಯಲ್ಲಿ ದರ್ಶನ್‌ಗೆ ಐಟಿ ನೋಟಿಸ್ ಜಾರಿಯಾಗಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸೀಜ್ ಆಗಿರುವ 40 ಲಕ್ಷಕ್ಕಾಗಿ 57ನೇ ಸಿಸಿಎಚ್ ಕೋರ್ಟ್‌ಗೆ ದರ್ಶನ್, ಪ್ರದೂಷ್ ಕಡೆಯಿಂದ ಅರ್ಜಿ ಸಲ್ಲಿಕೆ ಮಾಡಲಾಗಿದೆ. ಪಿಎಫ್ ಮಾಡಿ ಸೀಜ್ ಆಗಿರುವ 40 ಲಕ್ಷ ರಿಲೀಸ್‌ಗೆ ಮನವಿ ಮಾಡಲಾಗಿದೆ.
ಪೊಲೀಸರು ವಶ ಪಡೆದುಕೊಂಡಿರುವ ಈ ಹಣ ಕೃತ್ಯಕ್ಕೆ ಬಳಕೆ ಮಾಡಲು ಸಂಗ್ರಹಿಸಿದ್ದಲ್ಲ. ಮೋಹನ್‌ರಾಜ್ ಕಡೆಯಿಂದ ಆಡಿಯೋ ಲಾಂಚ್‌ನ ಸಂಭಾವನೆಗೆ ಪಡೆದ ಹಣ. ನಾನು ಕಷ್ಟಪಟ್ಟು ದುಡಿದ ಹಣ ಇದು ಹಾಗಾಗಿ ರಿಲೀಸ್‌ಗೆ ಮನವಿ ಮಾಡಲಾಗಿದೆ. ಹಣ ತುರ್ತಾಗಿ ಬೇಕಾಗಿದ್ದು, ಪೊಲೀಸರು ಸೀಜ್ ಹಣ ಬಿಡುಗಡೆಗೆ ಸೂಚಿಸುವಂತೆ ಅರ್ಜಿ ಹಾಕಿದ್ದಾರೆ ದರ್ಶನ್ ಪರ ವಕೀಲರು.
ಸೀಜ್ ಆಗಿರುವ 40 ಲಕ್ಷ ಹಣದ ಮೂಲ ಯಾವುದು ಎನ್ನುವುದರ ಕುರಿತು ಇಡಿ ಅಧಿಕಾರಿಗಳು ಪತ್ತೆಗೆ ಮುಂದಾಗಿದ್ದಾರೆ. ಅಲ್ಲದೆ ಈ ಹಣವನ್ನು ತಮ್ಮ ವಶಕ್ಕೆ ನೀಡಲು ಕೇಳಿಕೊಂಡಿದೆ. ಈ ಕುರಿತು ದರ್ಶನ್‌ಗೆ ಐಟಿ ನೋಟಿಸ್ ನೀಡಲಾಗಿದೆ. ಸೀಜ್ ಆದ ಹಣದ ತನಿಖೆ ಮಾಡಲು ಬೇಕಾಗಿದ್ದು, ವಶಕ್ಕೆ ನೀಡಲು ಐಟಿ ಅರ್ಜಿ ಸಲ್ಲಿಸಿದೆ.
ಐಟಿ ಇಲಾಖೆಯ ನೋಟಿಸ್ ಜಾರಿ ಬೆನ್ನಲ್ಲೇ ದರ್ಶನ್ ವಕೀಲರು ರಿಲೀಸ್‌ಗೆ ಅರ್ಜಿ ಹಾಕಿದ್ದಾರೆ.
