Home » America: ವಿದ್ಯಾರ್ಥಿಯೊಂದಿಗೆ ಶಿಕ್ಷಕಿಯ ಲೈಂಗಿಕ ಸಂಪರ್ಕ – ಸಹಪಾಠಿಗಳೇ ಕಾವಲುಗಾರರು !!

America: ವಿದ್ಯಾರ್ಥಿಯೊಂದಿಗೆ ಶಿಕ್ಷಕಿಯ ಲೈಂಗಿಕ ಸಂಪರ್ಕ – ಸಹಪಾಠಿಗಳೇ ಕಾವಲುಗಾರರು !!

5 comments

America: ಗುರು-ಶಿಷ್ಯರ ಸಂಬಂಧ ಎಷ್ಟು ಪವಿತ್ರವಾದು ಎಂಬುದನ್ನು ವಿಶೇಷವಾಗಿ ಏನು ವಿವರಿಸಬೇಕಿಲ್ಲ. ಅದು ಇಡೀ ವಿಶ್ವಕ್ಕೇ ಗೊತ್ತಿರುವುದು. ಆದರೆ ಇತ್ತೀಚಿನ ದಿನಗಳಲ್ಲಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ನಡುವೆ ಲೈಂಗಿಕ ಸಂಪರ್ಕಗಳು ನಡೆಯುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದ್ದು ಈ ಪವಿತ್ರ ಬಾಂಧವ್ಯದ ಅರ್ಥಗೆಡಿಸುತ್ತಿದೆ. ಇದೀಗ ಮತ್ತೆ ಅಂತದ್ದೇ ಒಂದು ಪ್ರಕರಣ ಬೆಳಕಿಗೆ ಬಂದಿದೆ.

ಹೌದು, ಅಮೆರಿಕದ(America) ಮಿಸೌರಿಯಲ್ಲಿ ಹೈಸ್ಕೂಲ್ ನ 26 ವರ್ಷದ ಮಾಜಿ ಗಣಿತ ಶಿಕ್ಷಕಿ 16 ವರ್ಷದ ವಿದ್ಯಾರ್ಥಿಯೊಂದಿಗೆ ಲೈಂಗಿಕ ಸಂಪರ್ಕ ನಡೆಸಿ ಸಿಕ್ಕಿಬಿದ್ದಿದ್ದಾಳೆ. ಅಷ್ಟೇ ಅಲ್ಲದೆ ಇವರ ಈ ಚೆಲ್ಲಾಟಕ್ಕೆ ವಿದ್ಯಾರ್ಥಿಯ ಸಹಪಾಠಿಗಳೇ ಕಾವಲುಗಾರರಾಗಿದ್ದರಂತೆ !! ಇದೀಗ ತಾನು ಎಸಗಿದ ಎಲ್ಲಾ ಅಪರಾಧಗಳು ನಿಜವೆಂದು ಸಮಾಜಕ್ಕೆ ಗೊತ್ತಾದಕೂಡಲೇ ಆ ಶಿಕ್ಷಕಿ ತಪ್ಪೊಪ್ಪಿಕೊಂಡಿದ್ದಾಳೆ.

ಅಂದಹಾಗೆ ಒಂದು ಮಗು ಹೊಂದಿದ್ದ ಕ್ಲಿಫ್ಟನ್-ಕಾರ್ಮ್ಯಾಕ್ ದಂಪತಿ ನಡುವೆ ವಿರಸವುಂಟಾಗಿ ಆಗಸ್ಟ್ 2023 ರಲ್ಲಿ ಆಕೆಯ ಪತಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು, ಒಂದು ತಿಂಗಳ ಬಳಿಕ ಅವರು ಅಧಿಕೃತವಾಗಿ ವಿಚ್ಛೇದನ ಪಡೆದರು ಎಂದು ನ್ಯಾಯಾಲಯದ ದಾಖಲೆಗಳು ತೋರಿಸುತ್ತವೆ. ಸದ್ಯ ಅಕ್ಟೋಬರ್ 11 ರಂದು ಪ್ರಕಟವಾಗಲಿರುವ ಶಿಕ್ಷೆಗಾಗಿ ಕಾಯುತ್ತಿರುವ ಆಕೆ ಪ್ರಸ್ತುತ ಗೃಹಬಂಧನದಲ್ಲಿದ್ದಾರೆ.

You may also like

Leave a Comment