Home » American Airlines: ಟೇಕ್ ಆಫ್ ಆದ ಅಮೇರಿಕನ್ ವಿಮಾನವನ್ನೇ ಲ್ಯಾಂಡ್ ಮಾಡಿಸಿತು ತಲೆಯಲ್ಲಿದ್ದ ಹೇನು !!

American Airlines: ಟೇಕ್ ಆಫ್ ಆದ ಅಮೇರಿಕನ್ ವಿಮಾನವನ್ನೇ ಲ್ಯಾಂಡ್ ಮಾಡಿಸಿತು ತಲೆಯಲ್ಲಿದ್ದ ಹೇನು !!

4 comments
American Airlines

American Airlines: ಆಗಷ್ಟೇ ಟೇಕ್ ಆಫ್ ಆಗಿದ್ದ ವಿಮಾನ ತುಸು ದೂರ ಹೋಗುತ್ತಿದ್ದಂತೆ ಇದ್ದಕ್ಕಿದ್ದಂತೆ ತುರ್ತು ಭೂ ಸ್ಪರ್ಷ ಮಾಡಿದೆ. ಈ ಸುದೀರ್ಘ ಪ್ರಯಾಣದ ನಡುವೆ ಏಕಾಏಕಿ ಫ್ಲೈಟ್ ಮಾರ್ಗ ಬದಲಾಗಿದೆ. ತುರ್ತು ವಿಮಾನ ಭೂಸ್ಪರ್ಶವಾಗಿದೆ. ಹಲವರಿಗೆ ಏನಾಗಿದೆ ಅನ್ನೋದೇ ಗೊತ್ತಿಲ್ಲ. ಕೆಲವರಿಗೆ ಭೂಸ್ಪರ್ಶ ಯಾಕೆ ಅನ್ನೋ ಗೊಂದಲ. ವಿಮಾನದಲ್ಲಿರುವ ಎಲ್ಲಾ ಪ್ರಯಾಣಿಕರು ಆರೋಗ್ಯವಾಗಿದ್ದಾರೆ. ಯಾರೂ ಅಸ್ವಸ್ಥರಾಗಿಲ್ಲ, ಯಾರಿಗೂ ತುರ್ತು ಚಿಕಿತ್ಸೆಯ ಅವಶ್ಯಕತೆ ಬಿದ್ದಿಲ್ಲ. ಹೀಗಿದ್ದರೂ ಭೂಸ್ಪರ್ಶವೇಕೆ ಅನ್ನೋದು ಹಲವು ಪ್ರಯಾಣಿಕರ ಅನುಮಾನವಾಗಿತ್ತು. ಆದರೆ ಇದಕ್ಕೆ ಕಾರಣ ತಲೆಯಲ್ಲಿರುವ ಒಂದು ಹೇನು ಎಂದು ಗೊತ್ತಾದಾಗ ಎಲ್ಲರೂ ಹೌಹಾರಿದ್ದಾರೆ.

ಹೌದು, ಅಮೆರಿಕನ್ ಏರ್‌ಲೈನ್ಸ್(American Airlines) ತನ್ನ ಮಹಿಳಾ ಪ್ರಯಾಣಿಕರ ತಲೆಯಲ್ಲಿ ಹೇನಿದೆ ಅನ್ನೋ ಕಾರಣಕ್ಕೆ ತುರ್ತು ಲ್ಯಾಂಡ್ ಮಾಡಿದೆ. ಲಾಸ್ ಎಂಜಲ್ಸ್‌(Los Angeles) ನಿಂದ ನ್ಯೂಯಾರ್ಕ್‌(Newark) ಗೆ ಪ್ರಯಾಣಿಸುತ್ತಿದ್ದ ವಿಮಾನ ಏಕಾಏಕಿ ಫೋನಿಕ್ಸ್‌ನಲ್ಲಿ ಲ್ಯಾಂಡ್ ಮಾಡಲಾಗಿದೆ. ಸಹ ಪ್ರಯಾಣಿಕ ಪಕ್ಕದಲ್ಲಿ ಕುಳಿತಿದ್ದ ಮಹಿಳೆ ತಲೆ ಮೇಲೆ ಹೇನು ಹರಿದಾಡುತ್ತಿದೆ ಎಂದು ದೂರು ನೀಡಿದ ಬೆನ್ನಲ್ಲೇ ವಿಮಾನ ಲ್ಯಾಂಡ್ ಆಗಿದೆ.

ಅಂದಹಾಗೆ ವಿಮಾನ ಫೋನಿಕ್ಸ್‌ನಲ್ಲಿ ಲ್ಯಾಂಡ್ ಆಗುತ್ತಿದ್ದ ಮಹಿಳೆಯೊಬ್ಬರು ಎಲ್ಲರಿಗಿಂತ ಬೇಗ ಇಳಿಯಲು ದಡಧಡ ಎಂದು ವಿಮಾನದ ಮುಂಭಾಗಕ್ಕೆ ತೆರಳಿದ್ದಾರೆ. ಇತರ ಯಾರೂ ಕೂಡ ಇಳಿಯಲು ಮುಂದಾಗಿಲ್ಲ. ಆ ಮಹಿಳೆಗೆ ತುರ್ತು ಭೂಸ್ಪರ್ಶವಾಗಿರುವುದು ಗೊತ್ತಾಗಿಲ್ಲ. ಕೆಲ ಹೊತ್ತಲ್ಲಿ ವಿಮಾನದ ಪ್ರಯಾಣಿಕರು ಗದ್ದಲ ಆರಂಭಿಸಿದ್ದಾರೆ. ಈ ವೇಳೆ ವಿಮಾನವ ಸಂಸ್ಥೆ ತುರ್ತು ಆರೋಗ್ಯದ ಕಾರಣಕ್ಕಾಗಿ ಭೂಸ್ಪರ್ಶ ಮಾಡಲಾಗಿದೆ. ಇದಕ್ಕಾಗಿ ಮಾರ್ಗ ಬದಲಾವಣೆ ಮಾಡಲಾಗಿದೆ ಎಂದಷ್ಟೇ ಮಾಹಿತಿ ನೀಡಿದ್ದಾರೆ. ಬಳಿಕ ಈ ತುರ್ತು ಆರೋಗ್ಯಕ್ಕೆ ಕಾರಣಾಗಿದ್ದು ಒಂದು ಹೇನು ಎಂದು ತಿಳಿದುಬಂದಿದೆ.

ಅಷ್ಟಕ್ಕೂ ಆಗಿದ್ದೇನು?
ಮಹಿಳೆ ತಲೆಯಲ್ಲಿ ಹೇನು ಹರಿದಾಡುತ್ತಿರುವುದನ್ನು ಪಕ್ಕದಲ್ಲಿ ಕುಳಿತ ಪ್ರಯಾಣಿಕ ಗಮನಿಸಿದ್ದಾನೆ. ಇದೊಂದು ವಿಮಾನವನ್ನೇ ಭೂಸ್ಪರ್ಶ ಮಾಡುವ ಸಮಸ್ಯೆ ಎಂದು ತುರ್ತಾಗಿ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಒಂದು ಹೇನು ವಿಚಾರವನ್ನು ಕ್ಯಾಪ್ಟನ್ ಕೂಡ ಗಂಭೀರವಾಗಿ ಪರಿಗಣಿಸಿದ್ದಾರೆ. ಬಳಿಕ ಮಾರ್ಗ ಬದಲಾಯಿಸಿ, ಲ್ಯಾಂಡಿಂಗ್ ಮಾಡಿದ್ದಾರೆ.

You may also like

Leave a Comment