Delhi election result 2025: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಫಲಿತಾಂಶದ ಬಗ್ಗೆ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.
ದೆಹಲಿಯಲ್ಲಿ ಹೆಚ್ಚಾಗಿದ್ದ ಕೊಳಕು ಯಮುನಾ, ಕೊಳಕು ಕುಡಿಯುವ ನೀರು, ಒಡೆದ ರಸ್ತೆಗಳು, ತುಂಬಿ ಹರಿಯುತ್ತಿರುವ ಚರಂಡಿಗಳು ಮತ್ತು ಪ್ರತಿ ಬೀದಿಯಲ್ಲಿ ತೆರೆದಿರುವ ಮದ್ಯದಂಗಡಿಗಳಿಗೆ ಸಾರ್ವಜನಿಕರು ತಮ್ಮ ಮತಗಳಿಂದ ತಕ್ಕ ಉತ್ತರ ನೀಡಿದ್ದಾರೆ. ದೆಹಲಿಯ ಈ ಮಹಾ ವಿಜಯಕ್ಕಾಗಿ ಹಗಲಿರುಳು ಶ್ರಮಿಸಿದ ಬಿಜೆಪಿ ಕಾರ್ಯಕರ್ತರು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ರಾಜ್ಯಾಧ್ಯಕ್ಷ ವೀರೇಂದ್ರ ಸಚ್‌ದೇವ ಅವರನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಮಹಿಳೆಯರಿಗೆ ಗೌರವವಿರಲಿ, ಅನಧಿಕೃತ ಕಾಲೋನಿ ನಿವಾಸಿಗಳ ಆತ್ಮಗೌರವವಿರಲಿ ಅಥವಾ ಸ್ವಯಂ ಉದ್ಯೋಗದ ಅಪಾರ ಸಾಧ್ಯತೆಗಳಿರಲಿ, ದೆಹಲಿ ಈಗ ಮೋದಿಯವರ ನೇತೃತ್ವದಲ್ಲಿ ಆದರ್ಶ ರಾಜಧಾನಿಯಾಗಲಿದೆ ಎಂದು ಅಮಿತ್ ಶಾ ಹೇಳಿದರು.
