Home » Mangaluru : ಪೆಟ್ರೋಲ್ ಹಾಕಿಸಿ ಹಣ ನೀಡದೆ ಪರಾರಿಯಾದ ಆಲ್ಟೊ ಕಾರು – ಮುಂದೆ ಆಕ್ಟಿವಾ, ಪಿಕಪ್ ಗೆ ಡಿಕ್ಕಿ!!

Mangaluru : ಪೆಟ್ರೋಲ್ ಹಾಕಿಸಿ ಹಣ ನೀಡದೆ ಪರಾರಿಯಾದ ಆಲ್ಟೊ ಕಾರು – ಮುಂದೆ ಆಕ್ಟಿವಾ, ಪಿಕಪ್ ಗೆ ಡಿಕ್ಕಿ!!

0 comments

Mangaluru : ಪೆಟ್ರೋಲ್ ಬಂಕಿನಲ್ಲಿ ಪೆಟ್ರೋಲ್ ಹಾಕಿಸಿಕೊಂಡು ಹಣ ನೀಡದೆ ಪರಾರಿಯಾಗುತ್ತಿದ್ದ ಆಲ್ಟೋ ಕಾರು ಒಂದು ಮುಂದೆ ಆಕ್ಟಿವಾ ಮತ್ತು ಪಿಕಪ್ ಗೆ ಡಿಕ್ಕಿ ಹೊಡೆದ ಘಟನೆ ಒಂದು ದಕ್ಷಿಣ ಕನ್ನಡದಲ್ಲಿ ನಡೆದಿದೆ.

ಹೌದು, ಮದ್ಯಪಾನ ಮಾಡಿ ಆಲ್ಟೋ ಕಾರಿನಲ್ಲಿ ಬಿ.ಸಿ‌.ರೋಡ್ ಪೆಟ್ರೋಲ್ ಬಂಕ್‌ ನಲ್ಲಿ ಪೆಟ್ರೋಲ್ ಹಾಕಿಸಿ ಹಣ ನೀಡದೆ ಸಾಲೆತ್ತೂರು ಮೂಲಕ ಇಬ್ಬರು ಪರಾರಿಯಾಗಿದ್ದು, ಸಮೀಪದ ಪಾಲ್ತಾಜೆಯಲ್ಲಿ ಆಕ್ಟಿವಾ ಮತ್ತು ಪಿಕಪ್ ವಾಹನಕ್ಕೆ ಢಿಕ್ಕಿ ಹೊಡೆದ ಘಟನೆ ಮೇ 20ರ ಮಂಗಳವಾರ ನಡೆದಿದೆ.

ಈ ಅಪಘಾತದಲ್ಲಿ ಆಕ್ಟಿವಾ ಸವಾರ ಕಟ್ಟತ್ತಿಲ ನಿವಾಸಿ ಅಬೂಬಕ್ಕರ್ ಗಂಭೀರ ಗಾಯಗೊಂಡಿದ್ದಾರೆ. ಸ್ಥಳಕ್ಕೆ 112 ಪೊಲೀಸರು ಮತ್ತು ವಿಟ್ಲ ಪೊಲೀಸರು ಆಗಮಿಸಿ ಕಾರು ಹಾಗೂ ಮದ್ಯದ ನಶೆಯಲ್ಲಿ ತೇಲಾಡುತ್ತಿದ್ದ ಯುವಕರಿಬ್ಬರನ್ನು ವಶಕ್ಕೆ ಪಡೆದಿದ್ದಾರೆ.

You may also like