Home » Puttur: ಬೆಳ್ಳಾರೆ ಪೊಲೀಸ್‌ ಠಾಣೆಯಿಂದ ಓರ್ವ ಎ.ಎಸ್.ಐ ಹಾಗೂ 4 ಮಂದಿ ಪೊಲೀಸ್ ಸಿಬ್ಬಂದಿಗಳು ವರ್ಗಾವಣೆ!

Puttur: ಬೆಳ್ಳಾರೆ ಪೊಲೀಸ್‌ ಠಾಣೆಯಿಂದ ಓರ್ವ ಎ.ಎಸ್.ಐ ಹಾಗೂ 4 ಮಂದಿ ಪೊಲೀಸ್ ಸಿಬ್ಬಂದಿಗಳು ವರ್ಗಾವಣೆ!

0 comments

Puttur: ಬೆಳ್ಳಾರೆ ಪೊಲೀಸ್‌ ಠಾಣೆಯಿಂದ ಓರ್ವ ಎ.ಎಸ್.ಐ ಮತ್ತು 4 ಮಂದಿ ಪೊಲೀಸ್ ಸಿಬ್ಬಂದಿಗಳು ಬೇರೆ ಠಾಣೆಗಳಿಗೆ ವರ್ಗಾವಣೆಗೊಂಡಿದ್ದಾರೆ.

ಎ.ಎಸ್.ಐ ದಾಮೋದರ್ ಎನ್.ನಾಯ್ಕ ರವರು ಉಪ್ಪಿನಂಗಡಿ ಪೊಲೀಸ್‌ ಠಾಣೆಗೆ, ಪೊಲೀಸ್‌ ಕಾನ್ಸ್ ಟೇಬಲ್ ಗಳಾದ ಸುಭಾಷ್ ಕಿತ್ತೂರು,ಚೇತನ್ ಕುಮಾ‌ರ್,ಹರೀಶ,ಜಗದೀಶರವರು ಪುತ್ತೂರು ಸಂಚಾರ ಠಾಣೆಗೆ ವರ್ಗಾವಣೆಗೊಂಡಿದ್ದಾರೆ.

ಪುತ್ತೂರು ಸಂಚಾರ ಠಾಣೆಯಿಂದ ಶಿವಕುಮಾ‌ರ್, ಕಲ್ಲಪ್ಪ ರೋನಾಡ್‌, ಗಂಗಾಧರ ಟಿ.ಎನ್, ಹರೀಶ ಜೆ.ಎ.ನಾಲ್ಕು ಮಂದಿ ಪೊಲೀಸ್ ಕಾನ್ಸ್ ಟೇಬಲ್‌ ಗಳು ಬೆಳ್ಳಾರೆ ಠಾಣೆಗೆ ವರ್ಗಾವಣೆಗೊಂಡು ಬರಲಿದ್ದಾರೆ.

ಸುಳ್ಯ ಠಾಣೆಯಿಂದ ಕಾನ್ಸ್ ಟೇಬಲ್ ರಾಜುರವರು ಬೆಳ್ಳಾರೆ ಠಾಣೆಗೆ ವರ್ಗಾವಣೆಗೊಂಡಿದ್ದಾರೆ.

You may also like