Home » Belagavi: ನಡು ರಸ್ತೆಯಲ್ಲೇ ಮಾಜಿ ಶಾಸಕನನ್ನು ಬರ್ಬರವಾಗಿ ಹತ್ಯೆ ಮಾಡಿದ ಆಟೋ ಡ್ರೈವರ್!!

Belagavi: ನಡು ರಸ್ತೆಯಲ್ಲೇ ಮಾಜಿ ಶಾಸಕನನ್ನು ಬರ್ಬರವಾಗಿ ಹತ್ಯೆ ಮಾಡಿದ ಆಟೋ ಡ್ರೈವರ್!!

0 comments

Belgavi: ಕ್ಷುಲ್ಲಕ ಕಾರಣಕ್ಕೆ ಮಾಜಿ ಶಾಸಕನ ಮೇಲೆ ಆಟೋ ಚಾಲಕ (Auto Driver) ಮಾರಣಾಂತಿಕ ಹಲ್ಲೆ ನಡೆಸಿ ಬರ್ಬರವಾಗಿ ಕೊಂದ ಆಘಾತಕಾರಿ ಘಟನೆ ಒಂದು ಬೆಳಗಾವಿಯಲ್ಲಿ ನಡೆದಿದೆ.

ಹೌದು, ಬೆಳಗಾವಿಯಲ್ಲಿ (Belgavi) ಆಘಾತಕಾರಿ ಘಟನೆ ನಡೆದಿದೆ. ಗೋವಾದ ಮಾಜಿ ಶಾಸಕರಾಗಿದ್ದಂತ ಲಾವೂ ಮಾಮಲೇದಾರ್(69) ಮೇಲೆ ಆಟೋ ಚಾಲಕನೊಬ್ಬ ಹಲ್ಲೆ ಮಾಡಿದ್ದು ಹಲ್ಲೆಯ ಬಳಿಕ ಕುಸಿದು ಬಿದ್ದಿದ್ದಂತ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೇ ಚಿಕಿತ್ಸೆ ಫಲಿಸದೇ ಮಾಜಿ ಶಾಸಕ ಲಾವೋ ಮಾಮಲೇದಾರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಆಟೋಗೆ ಮಾಜಿ ಶಾಸಕರ ಕಾರು ಟಚ್ ಆಗಿದ್ದಕ್ಕೆ ಕೃತ್ಯ:

ಖಡೇಬಜಾರ್ ಬಳಿ ಆಟೋಗೆ ಮಾಜಿ ಶಾಸಕರ ಕಾರು ಟಚ್ ಆಗಿದೆ. ಘಟನೆ ಬಳಿಕ ಅವರು ಶ್ರೀನಿವಾಸ ಲಾಡ್ಜ್ ಕಡೆಗೆ ಬಂದಿದ್ದಾರೆ. ಈ ವೇಳೆ ಲಾಡ್ಜ್ ಎದುರು ಬಂದು ಮಾಜಿ ಶಾಸಕನ ಮೇಲೆ ಚಾಲಕ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಹಲ್ಲೆಯಿಂದಾಗಿ ಲಾವೋ ಮಾಮಲೇದಾರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನೂ ಮಾಜಿ ಶಾಸಕ ಲಾವೋ ಮಾಮಲೇದಾರ್ ಮೃತ ದೇಹ ಬೆಳಗಾವಿ ಬೀಮ್ಸ್‌ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಘಟನೆ ಸಂಬಂಧ ತಕ್ಷಣವೆ ಆರೋಪಿಯನ್ನು ಮಾರ್ಕೆಟ್ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

You may also like