Home » ಅಯ್ಯೋ ಇದೇನಾಯಿತು..?? ವೈದ್ಯನಾಗುವ ಕನಸು ಹೊತ್ತು ಚೀನಾಗೆ ಹೋದ ಭಾರತೀಯನ ಬದುಕು ದುರಂತ ಅಂತ್ಯ..!!

ಅಯ್ಯೋ ಇದೇನಾಯಿತು..?? ವೈದ್ಯನಾಗುವ ಕನಸು ಹೊತ್ತು ಚೀನಾಗೆ ಹೋದ ಭಾರತೀಯನ ಬದುಕು ದುರಂತ ಅಂತ್ಯ..!!

0 comments

ವೈದ್ಯನಾಗಬೇಕೆಂಬ ಕನಸು ಹೊತ್ತ ಭಾರತೀಯ ಯುವಕನೊಬ್ಬ ಚೀನಾದಲ್ಲಿ ದುರಂತ ಅಂತ್ಯ ಕಂಡ ಘಟನೆ ನಡೆದಿದೆ.

ಕಳೆದ ಐದು ವರ್ಷಗಳಿಂದ ಚೀನಾದಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದ ತಮಿಳುನಾಡಿನ 22 ವರ್ಷದ ಭಾರತೀಯ ವಿದ್ಯಾರ್ಥಿಯೊಬ್ಬ ಅನಾರೋಗ್ಯದಿಂದ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ.

ಮೃತ ವಿದ್ಯಾರ್ಥಿ ಭಾರತೀಯ ಮೂಲದ ಅಬ್ದುಲ್ ಶೇಖ್, ತನ್ನ ಕೋರ್ಸ್‌ನ ಕೊನೆಯ ಹಂತದ ಇಂಇಂಟರ್ನ್ಶಿಪನ್ನು ಚೀನಾದಲ್ಲಿ ಮಾಡುತ್ತಿದ್ದ. ಇತ್ತೀಚೆಗಷ್ಟೇ ಭಾರತಕ್ಕೆ ಬಂದಿದ್ದ ಈತ, ಡಿಸೆಂಬರ್ 11ರಂದು ಚೀನಾಕ್ಕೆ ಹಿಂತಿರುಗಿದ್ದ.

ಶೇಖ್ ಚೀನಾಕ್ಕೆ ತೆರಳಿದ ನಂತರ ಕ್ವಾರಂಟೈನ್​ಗೆ 8 ದಿನಗಳ ಕಾಲ ಒಳಗಾಗಿದ್ದು, ಈ ಸಂದರ್ಭದಲ್ಲಿ ಅನಾರೋಗ್ಯಕ್ಕೆ ತುತ್ತಾಗಿದ್ದು, ಸೂಕ್ತ ಚಿಕಿತ್ಸೆ ನೀಡಿದರೂ, ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಯುವಕನ ಕುಟುಂಬ ಆರ್ಥಿಕವಾಗಿ ಹಿಂದುಳಿದಿದ್ದು, ಆತನ ಮೃತದೇಹವನ್ನು ಮರಳಿ ಭಾರತಕ್ಕೆ ತರಲು ವಿದೇಶಾಂಗ ಸಚಿವಾಲಯದ ನೆರವನ್ನು ಕೇಳಿದೆ ಎಂದು ವರದಿಯಾಗಿದೆ.

You may also like

Leave a Comment