5
Mangaluru : ರೈಲು (train) ಹತ್ತಲು ಹೋಗಿ ವೃದ್ಧನೊಬ್ಬ ನಿಯಂತ್ರಣ ಕಳೆದುಕೊಂಡು ಬಳಿಕ ಪ್ರಯಾಣಿಕರು ಆತನನ್ನು ರಕ್ಷಿಸಿದ ಘಟನೆ ಮಂಗಳೂರಿನ(Mangaluru) ಸುರತ್ಕಲ್ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.
ಹೌದು, ಚಲಿಸುತ್ತಿದ್ದ ರೈಲನ್ನು ಏಕಾಏಕಿ ಹತ್ತಲು ವೃದ್ದ ಮುಂದಾಗಿದ್ದಾರೆ. ಈ ವೇಳೆ ರೈಲು ವೇಗ ಪಡೆದುಕೊಂಡಿದ್ದು, ಇತ್ತ ವೃದ್ಧ ನಿಯಂತ್ರಣ ಕಳೆದುಕೊಂಡಿದ್ದಾರೆ. ರೈಲಿನಿಂದ ಕೆಳಗೆ ಬೀಳುವಷ್ಟರಲ್ಲಿ ರೈಲ್ವೆ ಸಿಬ್ಬಂದಿಯಿಂದ ವೃದ್ದನ ರಕ್ಷಣೆ ಮಾಡಲಾಗಿದೆ.
ಈ ಕುರಿತಾದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ವೃದ್ಧ ರೈಲು ಹತ್ತಲು ಹೋದಾಗ ರೈಲು ಮುಂದೆ ಚಲಿಸುತ್ತದೆ ಚಲಿಸುತ್ತದೆ. ಬಳಿಕ ವೃದ್ಧ ರೈಲನ್ನು ಹಿಡಿದುಕೊಂಡೆ ಮುಂದೆ ಸಾಗುತ್ತಾ ಬರುತ್ತಾರೆ. ಈ ವೇಳೆ ಅವರಿಗೆ ನಿಯಂತ್ರಣ ತಪ್ಪುತ್ತದೆ. ಅಷ್ಟರಲ್ಲಿ ಅಲ್ಲಿಂದ ಪ್ರಯಾಣಿಕರೆಲ್ಲರೂ ಬಂದು ಅವರನ್ನು ಹಿಡಿದುಕೊಳ್ಳುತ್ತಾರೆ. ಬಳಿಕ ರೈಲು ನಿಲ್ಲುವುದನ್ನು ಕೂಡ ವಿಡಿಯೋದಲ್ಲಿ ಕಾಣಬಹುದು.
