Viral Video : ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಕೆಲವೊಂದು ವಿಡಿಯೋಗಳು ತುಂಬಾ ಗಂಭೀರತೆಯಿಂದ, ಆಶ್ಚರ್ಯಕರವಾಗಿ ಇದ್ದರೂ ಕೂಡ ನಮಗೆ ಕೆಲವೊಮ್ಮೆ ಅವು ನಗುತರಿಸಿಬಿಡುತ್ತವೆ. ಇದೀಗ ಅಂತದ್ದೇ ವಿಡಿಯೋ ಒಂದು ವೈರಲ್ ಆಗುತ್ತಿತ್ತು, ಎಲ್ಲ ರಸಗಳನ್ನು ಒಟ್ಟಿಗೆ ತರಿಸಿಬಿಡುತ್ತದೆ.
ಹೌದು, ಸದ್ಯ ವೈರಲ್ ಆದ ವಿಡಿಯೋದಲ್ಲಿ ಮುದುಕಿ ಒಬ್ಬಳು ಪ್ರೀತಿಯಿಂದ ಸಾಕಿದ್ದ ಮೇಕೆಯನ್ನು ಹತ್ತೊಯ್ಯಲು ಕಾಡಿನ ರಾಜ ಸಿಂಹವು ಗಾಂಭೀರ್ಯ ನಡೆಗೆಯೊಂದಿಗೆ ಕಳ್ಳನಡಿಗೆಯನ್ನು ಹೊತ್ತು ಬರುತ್ತದೆ. ಇದೇ ಸಮಯಕ್ಕೆ ಮನೆಯಿಂದ ಹೊರಗೆ ಬರುವ ಮುದುಕಿ ಸಿಂಹವನ್ನು ಕಂಡು ಚೂರು ವಿಚಲಿತಳಾಗದೆ ತನ್ನ ಕೈಯಲ್ಲಿದ್ದ ಚೊಂಬಿನಿಂದಲೇ ಸಿಂಹದ ತಲೆಗೆ ಎರಡು ಮೂರು ಬಾರಿ ಕುಟ್ಟಿ ಓಡಿಸಿಬಿಡುತ್ತಾಳೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು ಇದನ್ನು ಕಂಡ ನೆಟ್ಟಿಗರು ಬಿದ್ದು ಬಿದ್ದು ನಗುತ್ತಿದ್ದಾರೆ.
ಆದರೆ ಈ ವಿಡಿಯೋ ನೀ ಅಂದುಕೊಂಡಂತೆ ನೈಜವಾದದ್ದಲ್ಲ. ಇದು ಅಸಲಿ ವಿಡಿಯೋ ಎಂದು ಕಂಡರೂ ಕೂಡ, ಎ ಐ ಆಧಾರಿತವಾಗಿ ರಚಿಸಲಾಗಿದೆ. ಸದ್ಯ ಏನೇ ಆದರೂ ಕೂಡ ಇದನ್ನು ಕಂಡ ನೆಟ್ಟಿಗರು ನಗೆಗಡಲಲ್ಲಿ ತೇಲಿದ್ದಂತೂ ನಿಜ.
https://www.instagram.com/reel/DNnYPoiTrXf/?igsh=MWtycmlyamI4MXZ0eA==
Karnataka Gvt: ರಾಜ್ಯದಲ್ಲಿ ದ್ವಿಭಾಷಾ ನೀತಿ- ಕೆಲಸ ಕಳೆದುಕೊಳ್ತಾರ 25,000 ಹಿಂದಿ ಶಿಕ್ಷಕರು?
