Priyanka Kharge: ಪ್ರತಾಪ್ ಸಿಂಹ ಮತ್ತು ಪ್ರಿಯಾಂಕ್ ಖರ್ಗೆ ನಡುವಿನ ಮಾತಿನ ಸಮರವು ಟ್ವಿಟರ್‌ನಲ್ಲಿ ಮುಂದುವರೆದಿದೆ. ಪ್ರಿಯಾಂಕ್ ಖರ್ಗೆ ಅವರ ಹೆಸರನ್ನು ಪ್ರಸ್ತಾಪಿಸಿ ವ್ಯಂಗ್ಯವಾಡಿದ ಪ್ರತಾಪ್ ಸಿಂಹಗೆ ಖರ್ಗೆ ತಿರುಗೇಟು ನೀಡಿದ್ದಾರೆ.
ಸ್ವತಃ ಬಿಜೆಪಿಯಿಂದಲೇ ತಿರಸ್ಕೃತಗೊಂಡು ಬೆಲೆ ಕಳೆದುಕೊಂಡಿರುವ ಪ್ರತಾಪ್ ಸಿಂಹ ಎಂಬ ಔಟ್ ಡೇಟೆಡ್ ವ್ಯಕ್ತಿ ನನ್ನ ಬಗ್ಗೆ ಮಾತನಾಡುವ ಮೂಲಕ ಮಾರ್ಕೆಟ್ ಕುದುರಿಸಿಕೊಳ್ಳುವ ತವಕದಲ್ಲಿದ್ದಾರೆ. ವಿಜಯೇಂದ್ರ ಹಠವೋ ಬಣದಲ್ಲಿರುವ ಪ್ರತಾಪ್ ಸಿಂಹ ಮೊದಲು ತಮ್ಮ ಅಭಿಯಾನದಲ್ಲಿ ಯಶಸ್ವಿಯಾಗಿ, ತಮ್ಮ ಸಾಮರ್ಥ್ಯ ನಿರೂಪಿಸಿದ ನಂತರ ನನ್ನ ಬಗ್ಗೆ ಗಮನ ಕೊಡಲಿ ಎಂದು ಸಚಿವ ಪ್ರಿಯಾಂಕ ಖರ್ಗೆ ತಮ್ಮ x ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.
ಮಿಸ್ಟರ್, ಪ್ರತಾಪ್ ಅವರೇ, ಬಿಜೆಪಿ ಪಕ್ಷ ನಿಮಗೆ ಟಿಕೆಟ್ ನೀಡದೆ ಮೂಲೆಗೆ ತಳ್ಳಿದ್ದೇಕೆ? ಸಾಮರ್ಥ್ಯವಿಲ್ಲದ್ದಕ್ಕಾ? ಟಿಕೆಟ್ ಅಷ್ಟೇ ಅಲ್ಲ, ಪಕ್ಷದಲ್ಲೂ ಯಾವುದೇ ಪ್ರಮುಖ ಹುದ್ದೆ ನೀಡದೆ ನಿರ್ಲಕ್ಷಿಸಿರುವುದೇಕೆ? ಅರ್ಹತೆ ಇಲ್ಲದ್ದಕ್ಕಾ? ನರಿಗಳು ಸಿಂಹ ಅಂತ ಹೆಸರಿಟ್ಟುಕೊಂಡ ಮಾತ್ರಕ್ಕೆ ಸಿಂಹ ಆಗಲು ಸಾಧ್ಯವಿಲ್ಲ ಎಂದಿದ್ದಾರೆ.
ನನ್ನ ಬಗ್ಗೆ ಮಾತನಾಡಲು ಗಂಭೀರ ವಿಷಯಗಳಿಲ್ಲದೆ ನನ್ನ ಹೆಸರಿನ ಬಗ್ಗೆ ತಲೆಕೆಡಿಸಿಕೊಳ್ಳುವ ಬದಲು ತಮ್ಮ ರಾಜಕೀಯ ಭವಿಷ್ಯದ ಬಗ್ಗೆ ತಲೆಕೆಡಿಸಿಕೊಂಡರೆ ಒಳ್ಳೆಯದು.
https://x.com/PriyankKharge/status/1942054690990199295?t=hXs9nG9fCPJa6paXMuh6ww&s=08
ಇದನ್ನೂ ಓದಿ: Toxic: ‘ಟಾಕ್ಸಿಕ್’ ಚಿತ್ರದಿಂದ ರವಿ ಬಸ್ರೂರು ಔಟ್? ಅವರ ಬದಲು ಇವರು…
