Tumakuru : ಇತ್ತೀಚಿಗೆ ತುಮಕೂರು ಜಿಲ್ಲೆಯಲ್ಲಿ ಚಿರತೆಯ ಬಾಲ ಹಿಡಿದು ಬೋನಿಗೆ ಹಾಕಿ ಎಲ್ಲರನ್ನು ಅಚ್ಚರಿಗೊಳಿಸಿದ್ದ ಆನಂದ್ ಗೆ ಇದೀಗ ದೊಡ್ಡ ಶಾಕ್ ಎದುರಾಗಿದೆ. ಇದು ಗೊತ್ತಾದ್ರೆ ನಿಮಗೂ ಕಣ್ಣೀರು ಬರುತ್ತದೆ.
ಹೌದು, ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿ ಆನಂದ್ ಅವರ ಮಗಳು 13 ವರ್ಷದ ಮಗಳು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾಳೆ. ಆನಂದ್ ಅವರ ಮಗಳು ಕವನ (13) ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ಆದರೆ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ. ತುಮಕೂರು ಜಿಲ್ಲೆಯ ತಿಪಟೂರಿನಲ್ಲಿ ಈ ಘಟನೆ ನಡೆದಿದೆ.
ಅಂದಹಾಗೆ ರಂಗಾಪುರ ಬಳಿಯ ಚಿಕ್ಕಕೊಟ್ಟಿಗೇನಹಳ್ಳಿ ನಿವಾಸಿಯಾಗಿದ್ದ ಆನಂದ್ ಕಳೆದ ಒಂದು ವಾರದ ಹಿಂದೆ ಅರಣ್ಯ ಇಲಾಖೆ ಸಿಬ್ಬಂದಿಗಳಿಂದ ತಪ್ಪಿಸಿಕೊಂಡು ತೆರಳುತ್ತಿದ್ದ ಚಿರತೆಯ ಬಾಲ ಹಿಡಿದು ಚಿರತೆ ಸೆರೆ ಹಿಡಿದಿದ್ದರು. ಆನಂದ್ ಚಿರತೆ ಸೆರೆ ಹಿಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆನಂದ್ ಧೈರ್ಯಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿತ್ತು. ಇದಾದ ಕೆಲವೇ ದಿನದಲ್ಲಿ ಆನಂದ್ ಮಗಳು ಸಾವನಪ್ಪಿದ್ದು , ಇಡೀ ಕುಟುಂಬ ದಿಗ್ಭ್ರಮೆಗೆ ಒಳಗಾಗಿದೆ.
