Home » BJP: ಬೆಲೆ ಏರಿಕೆ ವಿರುದ್ಧ ರೊಚ್ಚಿಗೆದ್ದ ಬಿಜೆಪಿ: ನಾಳೆಯಿಂದ ಅಹೋರಾತ್ರಿ ಧರಣಿ!

BJP: ಬೆಲೆ ಏರಿಕೆ ವಿರುದ್ಧ ರೊಚ್ಚಿಗೆದ್ದ ಬಿಜೆಪಿ: ನಾಳೆಯಿಂದ ಅಹೋರಾತ್ರಿ ಧರಣಿ!

by ಕಾವ್ಯ ವಾಣಿ
0 comments

BJP: ಸರ್ಕಾರದ ಬೆಲೆ ಏರಿಕೆ ಕ್ರಮ ವಿರೋಧಿಸಿ ಸರ್ಕಾರದ ವಿರುದ್ಧ ರಾಜ್ಯ ವ್ಯಾಪಿ ಸರಣಿ ಪ್ರತಿಭಟನೆ ಮತ್ತು ಹೋರಾಟಕ್ಕೆ ಬಿಜೆಪಿ (BJP) ಸಿದ್ಧತೆ ನಡೆಸಿದ್ದು, ನಾಳೆ ಬುಧವಾರದಿಂದ ರಾಜ್ಯಾಧ್ಯಕ್ಷ ವಿಜಯೇಂದ್ರ ನೇತೃತ್ವದಲ್ಲಿ ಧರಣಿ ಆರಂಭವಾಗಲಿದೆ.

ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ನಾಳೆ ಬೆಳಿಗ್ಗೆ 11 ರಿಂದ ಅಹೋರಾತ್ರಿ ಧರಣಿ ಆರಂಭವಾಗಲಿದ್ದು, ಈ ಧರಣಿಯಲ್ಲಿ ಎಲ್ಲ ಶಾಸಕರು, ವಿಧಾನಪರಿಷತ್‌ ಸದಸ್ಯರು, ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.

ಇನ್ನು, ಬಿಜೆಪಿಯ ಶಾಸಕರ ಅಮಾನತು ಕ್ರಮ ಖಂಡಿಸಿ ನಾಳೆಯೇ ಕೆಂಗಲ್ ಹನುಮಂತಯ್ಯ ಪ್ರತಿಮೆ ಮುಂದೆ ಬಿಜೆಪಿ ಪ್ರತಿಭಟಿಸಲಿದೆ.

You may also like