Home » Annabhagya: ಕಾಳಸಂತೆಗೆ ಅನ್ನಭಾಗ್ಯ ಅಕ್ಕಿ ಮಾರಾಟ – ಮಾಲು ಸಮೇತ ಓರ್ವ ಅಂದರ್

Annabhagya: ಕಾಳಸಂತೆಗೆ ಅನ್ನಭಾಗ್ಯ ಅಕ್ಕಿ ಮಾರಾಟ – ಮಾಲು ಸಮೇತ ಓರ್ವ ಅಂದರ್

0 comments

Annabhagya: ಕಾಳಸಂತೆಗೆ ಮಾರಾಟವಾಗಿದ್ದ ಭಾರೀ ಪ್ರಮಾಣದ ಅನ್ನಭಾಗ್ಯ ಅಕ್ಕಿಯನ್ನು ಆಹಾರ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ಪತ್ತೆಹಚ್ಚಿ ಮಾಲು ಹಾಗೂ ಲಾರಿ ಸಮೇತ ಆರೋಪಿಯೋರ್ವನನ್ನು ವಶಕ್ಕೆ ಪಡೆದುಕೊಂಡಿರುವ ಘಟನೆ ಸೋಮವಾರಪೇಟೆಯಲ್ಲಿ ನಡೆದಿದೆ.

ಕೊಣನೂರಿನ ಇದ್ರೀಸ್ ಎಂಬಾತ ಸೋಮವಾರಪೇಟೆ ತೋಟಗಾರಿಕೆ ಇಲಾಖೆಯ ಸಮೀಪ ಕಡಿಮೆ ಬೆಲೆಗೆ ಅನ್ನಭಾಗ್ಯ ಅಕ್ಕಿಯನ್ನು ಖರೀದಿಸಿ ಬೇರೆ ಕಡೆಗೆ ಸಾಗಿಸುವ ದಂಧೆಯಲ್ಲಿ ತೊಡಗಿದ್ದ ಸಂದರ್ಭ ಈ ದಾಳಿ ನಡೆದಿದೆ. ಲಾರಿ ಸಮೇತ ಈತನಿಂದ 142970 ರೂ. ಮೌಲ್ಯದ 4200 ಕೆ.ಜಿ. ಅಕ್ಕಿಯನ್ನು ವಶ ಪಡಿಸಿಕೊಳ್ಳಲಾಗಿದೆ.

ಈತನಿಗೆ ಅನ್ನಭಾಗ್ಯ ಅಕ್ಕಿಯನ್ನು ಮಾರಾಟ ಮಾಡಿದವರಿಗೆ ಏನು ಶಿಕ್ಷೆ ಎಂಬುದನ್ನು ಸಾರ್ವಜನಿಕರು ಪ್ರಶ್ನಿಸಿದ್ದಾರೆ. ಹಣ ನೀಡಿ ಅಕ್ಕಿ ಪಡೆದುಕೊಂಡು ಬೇರೆಡೆಗೆ ಸಾಗಿಸಿದವನನ್ನು ವಶಕ್ಕೆ ಪಡೆಯಲಾಗಿದೆ. ಆದರೆ ಆತನಿಗೆ ಅಕ್ಕಿ ನೀಡಿದವರಿಗೂ ಕೂಡ ಶಿಕ್ಷೆ ಆಗಬೇಕು ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

You may also like