Home » Bengaluru: ರೇಣುಕಾ ಸ್ವಾಮಿ ಕೇಸ್ ನಂತೆ ಬೆಂಗಳೂರಲ್ಲಿ ಮತ್ತೊಂದು ಕೃತ್ಯ – ಹುಡುಗಿಗೆ ಮೆಸೇಜ್ ಮಾಡಿದ್ದಕ್ಕೆ ಯುವಕನನ್ನು ಬೆತ್ತಲೆಗೊಳಿಸಿ ಚಿತ್ರಹಿಂಸೆ ನೀಡಿ ವಿಕೃತಿ.!

Bengaluru: ರೇಣುಕಾ ಸ್ವಾಮಿ ಕೇಸ್ ನಂತೆ ಬೆಂಗಳೂರಲ್ಲಿ ಮತ್ತೊಂದು ಕೃತ್ಯ – ಹುಡುಗಿಗೆ ಮೆಸೇಜ್ ಮಾಡಿದ್ದಕ್ಕೆ ಯುವಕನನ್ನು ಬೆತ್ತಲೆಗೊಳಿಸಿ ಚಿತ್ರಹಿಂಸೆ ನೀಡಿ ವಿಕೃತಿ.!

by V R
0 comments

Bengaluru : ಕಳೆದ ವರ್ಷ ಚಿತ್ರದುರ್ಗದ ರೇಣುಕಾ ಸ್ವಾಮಿ ಭೀಕರ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅವರು ಜೈಲು ಸೇರಿದ್ದರು. ರೇಣುಕಾಸ್ವಾಮಿಯನ್ನು ಭೀಕರವಾಗಿ ಕೊಲೆ ಮಾಡಿದ ಪ್ರಕರಣದ ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿತ್ತು. ಇದೀಗ ಇಂಥದ್ದೇ ಒಂದು ಪ್ರಕರಣ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.

ಹೌದು, ಹುಡುಗಿಯ ವಿಚಾರಕ್ಕೆ ಯುವಕನ ಬಟ್ಟೆ ಬಿಚ್ಚಿ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿಯಲ್ಲಿ ನಡೆದಿದೆ.

ರಾಕ್ಷಸರಂತೆ ವರ್ತಿಸಿದ ಇವರಿಗೆ ದರ್ಶನ್ ಸ್ಪೂರ್ತಿ ಎಂದು ಹೇಳಲಾಗುತ್ತಿದ್ದು, ನೀನು ರೇಣುಕಾ ಸ್ವಾಮಿ ರೀತಿ ಸಾಯ್ತಿಯ ಎಂದು ಯುವಕನಿಗೆ ರೇಣುಕಾ ಸ್ವಾಮಿ ಹೆಸರಲ್ಲಿ ಹಲ್ಲೆ ಮಾಡಿದ್ದಾರೆ. ಒಬ್ಬನ ಮೇಲೆ 8 ರಿಂದ 10 ಜನ ದುಷ್ಕರ್ಮಿಗಳು ಮುಗಿಬಿದ್ದು ಭೀಕರವಾಗಿ ಹಲ್ಲೆ ಮಾಡಿದ್ದಾರೆ. ಕೋಲುಗಳಿಂದ ಯುವಕನಿಗೆ ಮನಸೋ ಇಚ್ಛೆ ಥಳಿಸಿದ್ದಾರೆ.

ಅಲ್ಲದೆ ರೇಣುಕಾಸ್ವಾಮಿ ಕೊಲೆ ಕೇಸ್ ನಂತೆ ಇದೂ ಆಗತ್ತೆ..’ ಎಂದು ವಿಡಿಯೋ ಮಾಡಿದ್ದಲ್ಲದೆ, ‘ಎ1 ಹೇಮಂತ ಎ2 ನಾನು..’ ಎಂದು ವಿಡಿಯೋ ಮಾಡಿದ್ದಾರೆ. 8-10 ಯುವಕರಿಂದ ಬಟ್ಟೆ ಬಿಚ್ಚಿ ಹಲ್ಲೆ ಮಾಡಲಾಗಿದೆ. ಯುವಕನನ್ನ ಬೆತ್ತಲೆ ಮಾಡಿ ಕೀಚಕರು ಹಲ್ಲೆ ಮಾಡಿದ್ದಲ್ಲದೆ, ಆತನ ಮರ್ಮಾಂಗ ತುಳಿದು ವಿಕೃತಿ ಮರೆದಿದ್ದಾರೆ.

ಏನಿದು ಪ್ರಕರಣ?

ಹುಡುಗಿ ವಿಚಾರಕ್ಕೆ ಕುಶಾಲ್‌ ಎನ್ನುವ ವಿದ್ಯಾರ್ಥಿಯ ಮೇಲೆ ಹಲ್ಲೆ ಮಾಡಲಾಗಿದೆ. ಕಾಲೇಜಿಗೆ ಹೋಗುವಾಗ ಕುಶಾಲ್ ಹಾಗೂ ಯುವತಿ ಮಧ್ಯೆ ಪ್ರೀತಿ ಮೂಡಿತ್ತು.ಎರಡು ವರ್ಷದ ಪ್ರೀತಿ ಕೆಲ ತಿಂಗಳ ಹಿಂದೆ ಮುರಿದು ಬಿದ್ದಿತ್ತು. ಈ ವೇಳೆ ಯುವತಿಗೆ ಬೇರೊಂದು ಹುಡುಗನ ಪರಿಚಯವಾಗಿತ್ತು. ಇದನ್ನು ಸಹಿಸಲಾಗದ ಕುಶಾಲ್ ಯುವತಿಗೆ ಅಶ್ಲೀಲ ಮೆಸೆಜ್ ಮಾಡಿದ್ದ. ಯುವತಿ ತನ್ನ ಗೆಳೆಯ ಹಾಗೂ ಸ್ನೇಹಿತರ ಜೊತೆ ಸೇರಿ ಕಿಡ್ನಾಪ್ ಹಾಗೂ ಹಲ್ಲೆ ಪ್ಲಾನ್ ಮಾಡಿದ್ದಾರೆ. ಅದರಂತೆ ಕೂತು ಬಗೆ ಹರಿಸಿಕೊಳ್ಳುವುದಾಗಿ ಕರೆಸಿ ಕಾರ್ ನಲ್ಲಿ ಕಿಡ್ನಾಪ್ ಮಾಡಲಾಗಿದೆ. ನಿರ್ಜನ ಪ್ರದೇಶಕ್ಕೆ ಕೆರದೊಯ್ದು ಮಾರಣಾಂತಿಕ ಹಲ್ಲೆ ಮಾಡಿದ್ದಾರೆ.

ಇದನ್ನೂ ಓದಿ: Anjanadri: ಅಂಜನಾದ್ರಿ ಬೆಟ್ಟ ಏರಿ ಆಂಜನೇಯನ ದರ್ಶನಕ್ಕೆ ಬಂದ ಜಿಲ್ಲಾಧಿಕಾರಿ – ಪೂಜೆ ಮಾಡಲು ನಿರಾಕರಿಸಿದ ಅರ್ಚಕ

You may also like