Home » Virus: ದೇಶದಲ್ಲಿ ಮತ್ತೊಂದು ಅಪಾಯಕಾರಿ “ವೈರಸ್” ಪತ್ತೆ!

Virus: ದೇಶದಲ್ಲಿ ಮತ್ತೊಂದು ಅಪಾಯಕಾರಿ “ವೈರಸ್” ಪತ್ತೆ!

0 comments

Virus: ಭಾರತಕ್ಕೆ ಮತ್ತೊಂದು ಅಪಾಯಕಾರಿ ವೈರಸ್ (Virus) ಪ್ರವೇಶಿಸಿದೆ. ಹೌದು, “ಅಮೀಬಿಕ್ ಮೆನಿಂಗೊಎನ್ಸೆ ಫಾಲಿಟಿಸ್” ಎಂಬ ಮೆದುಳನ್ನು ತಿನ್ನುವ ವೈರಸ್ ಪತ್ತೆ ಆಗಿದೆ. ಅಷ್ಟೇ ಅಲ್ಲ ಇತ್ತೀಚೆಗೆ, ತಿರುವನಂತಪುರಂನಲ್ಲಿ 17 ವರ್ಷದ ಬಾಲಕನಿಗೆ ವೈರಸ್ ಇರುವುದು ದೃಢಪಟ್ಟಿದೆ. ಈ ಮೆದುಳನ್ನು ತಿನ್ನುವ ವೈರಸ್ ನಿಂದ ಈಗಾಗಲೇ 18 ಜನರು ಸಾವನ್ನಪ್ಪಿದ್ದಾರೆ. ಕೇರಳದಲ್ಲಿ 67 ಪ್ರಕರಣಗಳು ವರದಿಯಾಗಿವೆ.

ಮಾಹಿತಿಯ ಪ್ರಕಾರ, ಈ ವರ್ಷ ಕೇರಳದಲ್ಲಿ 67 “ಅಮೀಬಿಕ್ ಮೆನಿಂಗೊಎನ್ಸೆಫಾಲಿಟಿಸ್” ಪ್ರಕರಣಗಳು ದಾಖಲಾಗಿದ್ದು, 18 ಸಾವುಗಳು ಸಂಭವಿಸಿವೆ. ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು “ಅಮೀಬಿಕ್ ಮೆನಿಂಗೊಎನ್ಸೆಫಾಲಿಟಿಸ್” ನಿಂದ ಬಚಾವ್ ಆಗಲು ತುರ್ತು ಅಗತ್ಯವನ್ನು ತಿಳಿಸಿದ್ದು, ಸಾರ್ವಜನಿಕರು ನೀರಿನ ಸುರಕ್ಷತೆ ಮತ್ತು ನೈರ್ಮಲ್ಯದ ಬಗ್ಗೆ ಜಾಗರೂಕರಾಗಿರಲು ಸಲಹೆ ನೀಡಿದ್ದಾರೆ.

ಈ ಮೆದುಳನ್ನು ತಿನ್ನುವ ಅಮೀಬಾ ಮೆದುಳನ್ನು ತಿನ್ನುತ್ತದೆ. ಇದು ಹೆಚ್ಚಾಗಿ ಕೇರಳ ರಾಜ್ಯದಲ್ಲಿ ಕಂಡುಬರುತ್ತದೆ. ಇದು “ನೇಗ್ಲೇರಿಯಾ ಫೌಲೆರಿ “ಎಂಬ ಸೂಕ್ಷ್ಮಜೀವಿಯಿಂದ ಹರಡುತ್ತದೆ. ಈ ವೈರಸ್ ಸೋಂಕಿಗೆ ಒಳಗಾದರೆ ಬದುಕುಳಿಯುವ ಸಾಧ್ಯತೆಗಳು ಕಡಿಮೆ. ಅಲ್ಲದೇ ಇದು ದೇಶದ ಅತ್ಯಂತ ಮಾರಕ ರೋಗಗಳಲ್ಲಿ ಒಂದಾಗಿದೆ.

ಮುಖ್ಯವಾಗಿ ಈ ವೈರಸ್ ಸರಿಯಾಗಿ ಸ್ವಚ್ಛಗೊಳಿಸದ ಕೊಳಗಳು, ನದಿಗಳು, ಸರೋವರಗಳು, ಕಾಲುವೆಗಳು ಮತ್ತು ಈಜುಕೊಳಗಳಲ್ಲಿ ಇದು ಹೆಚ್ಚಾಗಿ ಕಂಡುಬರುತ್ತದೆ. ಯಾರಾದರೂ ಕಲುಷಿತ ನೀರಿನಲ್ಲಿ ಸ್ನಾನ ಮಾಡುವಾಗ ಅಥವಾ ಈಜುವಾಗ, ಈ ಅಮೀಬಾ ಮೂಗಿನ ಮೂಲಕ ಪ್ರವೇಶಿಸುತ್ತದೆ. ಅಲ್ಲಿಂದ, ಅದು ನೇರವಾಗಿ ಮೆದುಳನ್ನು ತಲುಪುತ್ತದೆ ಮತ್ತು ಅಲ್ಲಿ ಗಂಭೀರ ಸೋಂಕನ್ನು ಉಂಟುಮಾಡುತ್ತದೆ. ಇದು ಮೆದುಳಿನ ಕೋಶಗಳನ್ನು ತಿನ್ನಲು ಪ್ರಾರಂಭಿಸುತ್ತದೆ. ಅದಕ್ಕಾಗಿಯೇ ಇದನ್ನು “ಮೆದುಳನ್ನು ತಿನ್ನುವ ಅಮೀಬಾ” ಎಂದು ಕರೆಯಲಾಗುತ್ತದೆ. ಈ ಅಮೀಬಾ ಕುಡಿಯುವ ನೀರಿನಿಂದ ಮನುಷ್ಯರಿಗೆ ಸೋಂಕು ತಗುಲುವುದಿಲ್ಲ.

ಇದನ್ನೂ ಓದಿ:Heavy rainfall: ಡೆಹ್ರಾಡೂನ್‌ನಲ್ಲಿ ಮೇಘ ಸ್ಫೋಟ: ನೀರಿನಲ್ಲಿ ಮುಳುಗಿದ ತಪಕೇಶ್ವರ ಮಹಾದೇವ ದೇವಸ್ಥಾನ

ಸೋಂಕು ತಗುಲಿದ ಕೆಲವೇ ದಿನಗಳಲ್ಲಿ ಲಕ್ಷಣಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಆರಂಭದಲ್ಲಿ, ತೀವ್ರ ತಲೆನೋವು, ಜ್ವರ, ವಾಂತಿ ಮತ್ತು ಕುತ್ತಿಗೆ ನೋವು ಮುಂತಾದ ಲಕ್ಷಣಗಳು ಕಂಡುಬರುತ್ತವೆ.

You may also like