7
ಬಾಗಲಕೋಟೆಯಲ್ಲಿ ಕೋಡಿಶ್ರೀ ಅವರು, ಕೊರೊನಾ ಬಳಿಕ ಮತ್ತೊಂದು ರೋಗ ಬರಲಿದೆ. ಪ್ರಪಂಚದಾದ್ಯಂತ ಅದು ವಕ್ಕರಿಸಲಿದೆ ಮಾತ್ರವಲ್ಲದೇ ಐದು ವರ್ಷಗಳ ಕಾಲ ಜನರ ನಿದ್ದೆಗೆಡಿಸಲಿದೆ ಎಂದು ಕೋಡಿಶ್ರೀ ಭವಿಷ್ಯ ನುಡಿದಿದ್ದಾರೆ.
ಕೊರೊನಾ ಕುರಿತು ಈ ಮೊದಲೇ ಹೇಳಿದ್ದೆ. ರೋಗ ಬರುತ್ತೆ ಜನ ಸಾಯ್ತಾರೆ ಅಂತ. ಮದ್ದಿಲ್ಲದ ವ್ಯಾದಿ ಬರುತ್ತದೆ, ಎಚ್ಚೆತ್ತುಕೊಳ್ಳಬೇಕು ಅಂದೆ. ಈಗಲೂ ಹೇಳ್ತೀನಿ ಒಂದು ರೋಗು ಬರುವ ಚಾನ್ಸಸ್ ಇದೆ. ಐದು ವರ್ಷ ಕಾಡುತ್ತದೆ. ಎಚ್ಚರಿಕೆ ವಹಿಸಿ ಎಂದು ಹೇಳಿದ್ದಾರೆ.
ಜಗತ್ತಿನಾದ್ಯಂತ ಅಪಾಯವಿದೆ. ಸೂಳೆಯ ಮಗು ಹುಟ್ಟಿ ಆಳುವನು ಮುನಿಪುರವ. ಯುದ್ಧವಿಲ್ಲದ ಮಡಿಯೆ ಪುರವೆಲ್ಲ ಕೋಳಾದೀತು. ಅರಸನಾಲಯಕ್ಕೆ ಕಾರ್ಮೋಡ ಕವಿದೀತಿ. ಸ್ಟೇಟ್‌ಗೂ ಸೆಂಟ್ರಲ್‌ಗೂ ಇದೆ ಇದು. ನೋಡ್ತಿ ಗೊತ್ತಾಗುತ್ತದೆ ರಿಸಲ್ಟ್. ಯುದ್ಧ ಭೀತಿ ಸಾವು ನೋವು ಇರುತ್ತದೆ. ದೊಡ್ಡ ರೋಗ ಬರುತ್ತದೆ ಐದು ವರ್ಷ ಇರುತ್ತದೆ ಎಂದು ಹೇಳಿದ್ದಾರೆ.
