Home » ನಿಷೇಧಗೊಂಡಿರುವ PFI ಸಂಘಟನೆಯ ಮತ್ತೊಂದು ಸ್ಪೋಟಕ ಮಾಹಿತಿ ಬಹಿರಂಗ!

ನಿಷೇಧಗೊಂಡಿರುವ PFI ಸಂಘಟನೆಯ ಮತ್ತೊಂದು ಸ್ಪೋಟಕ ಮಾಹಿತಿ ಬಹಿರಂಗ!

0 comments

ದೇಶಾದ್ಯಂತ ಕೇಂದ್ರ ಸರಕಾರದಿಂದ ನಿಷೇಧಗೊಂಡಿರುವ ಪಿಎಫ್ ಐ ಸಂಘಟನೆಯ ಕೆಲವೊಂದು ವಿಷಯಗಳು ದಿನದಿಂದ ದಿನಕ್ಕೆ ಹೊರಗೆ ಬರುತ್ತಿದೆ. ಕೆಲ ದಿನಗಳ ಹಿಂದೆ ಕೇಂದ್ರ ಸರ್ಕಾರ ಪ್ಯಾಪುಲರ್ ಫ್ರಂಟ್ ಆಫ್ ಇಂಡಿಯಾ ( PFI) ಸಂಘಟನೆಯನ್ನು ನಿಷೇಧ ಮಾಡಿದ ಬೆನ್ನಲ್ಲೇ ಪಿಎಫ್ ಐನ ಸ್ಪೋಟಕ ಸಂಗತಿಗಳು ಬಯಲಾಗುತ್ತಿವೆ.

ಈಗ ಮತ್ತೊಂದು ಸ್ಫೋಟಕ ಮಾಹಿತಿ ಬಹಿರಂಗಗೊಂಡಿದ್ದು, ದೇಶಾದ್ಯಂತ ಹಿಡಿತ ಸಾಧಿಸಲು ಪಿಎಫ್ ಐ ಧರ್ಮಗುರುಗಳ ಮೂಲಕ ಮದರಸಗಳಲ್ಲೂ ಹಿಡಿತಕ್ಕೆ ಯತ್ನಿಸಿದ್ದರು ಎಂಬ ಭಯಾನಕ ಸತ್ಯ ಬಯಲಾಗಿದೆ. ಅದರಂತೆ ಮದರಸಗಳನ್ನು ಮೊದಲು ಹಿಡಿತಕ್ಕೆ ಪಡೆದು ಮಕ್ಕಳಲ್ಲಿ ಪಿಎಫ್ ಐ ಸಿದ್ಧಾಂತ ಬೋಧನೆಗೆ ಸಿದ್ಧತೆ ನಡೆಸಿದ್ದರು ಎನ್ನಲಾಗಿದೆ.

ಈ ಘಟನೆಯ ಸಂಬಂಧ ಪಿಎಫ್ ಐ ಕೇರಳ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಮದರಸಗಳಲ್ಲಿ ಧರ್ಮಗುರುಗಳ ಮೂಲಕ ಮದರಸಗಳನ್ನು ಸಂಪೂರ್ಣವಾಗಿ ಅಧೀನಕ್ಕೆ ಪಡೆದಿದ್ದು, ಅಷ್ಟು ಮಾತ್ರವಲ್ಲದೇ, ಮದರಸಗಳ ಅಧೀನಕ್ಕೆ ವಿರೋಧ ಮಾಡುವ ಜಮಾತ್ ಗಳಿಗೆ ಬೆದರಿಕೆ ಹಾಕಿದ್ದರು ಎಂಬ ಘೋರ ಸತ್ಯ ಹೊರಗೆ ಬಂದಿದೆ ಎಂದು ಹೇಳಲಾಗುತ್ತಿದೆ.

You may also like

Leave a Comment