Fire Accident: ಮುಂಜಾನೆ 3.30 ರ ಸುಮಾರಿಗೆ ಬೆಂಗಳೂರಿನ ನಗರತ್ ಪೇಟೆಯಲ್ಲಿರುವ ಪ್ಲಾಸ್ಟಿಕ್ ಮ್ಯಾಟ್ ಅಂಗಡಿಯಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಅವಘಡ ಎಂದು ಶಂಕೆ ವ್ಯಕ್ಯವಾಗಿದೆ. ಘಟನೆಯಲ್ಲಿ ಇಬ್ಬರು ಸಜೀವ ದಹನವಾಗಿದ್ದು, ಮತ್ತೆ ಮೂವರು ಮಂದಿ ಬೆಂಕಿಯಲ್ಲಿ ಸಿಲಿಕಿಕೊಂಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.
ಮೃತ ದೇಹವನ್ನ ವಿಕ್ಟೋರಿಯಾ ಆಸ್ಪತ್ರೆಗೆ ಪೊಲೀಸರು ರವಾನಿಸಿದ್ದಾರೆ. ಮೃತ ಮದನ್ ಕುಮಾರ್ ಮನೆಯಲ್ಲಿ ಇನ್ನೊಂದು ಮೃತ ದೇಹ ಪತ್ತೆ. ಕಮರ್ಷಿಯಲ್ ಬಿಲ್ಡಿಂಗ್ ಮೇಲಿದ್ದ ಮನೆ ಒಳಗೆ ಬೆಂಕಿ ಅವಘಡ ನಡೆದಿದ್ದು, ಮದನ್ ಸಿಂಗ್ ಎಂಬಾತ ಈತನ ಕುಟುಂಬ ಮೂರನೇ ಮಹಡಿಯಲ್ಲಿ ವಾಸವಿತ್ತು. ಮದನ್ ಸಿಂಗ್ ಸಾವನ್ನಪ್ಪಿದ್ದು, ಇನ್ನೊಂದು ಮೃತ ದೇಹ ಈತನ ಪತ್ನಿಯ ಮೃತದೇಹವ ಅಥವಾ ಮಕ್ಕಳ ಮೃತ ದೇಹವಾ ಎಂದು ಪರಿಶೀಲನೆ ನಡೆಸಲಾಗುತ್ತಿದೆ. ಇನ್ನೇನು ಕೆಲವೇ ಕ್ಷಣಗಳಲ್ಲಿ ಅಧಿಕೃತ ಮಾಹಿತಿ ಲಭ್ಯವಾಗಲಿದೆ.
ಹಲಸೂರುಗೇಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಒಟ್ಟು 5 ಅಗ್ನಿ ಶಾಮಕ ವಾಹನಗಳಿಂದ ಬೆಂಕಿ ನಂದಿಸುವ ಕಾರ್ಯ ನಡೆಸುತ್ತಿದ್ದು, ಮೊದಲ ಮಹಡಿಯಲ್ಲಿ ಮೂವರು ಇರುವ ಬಗ್ಗೆ ಅನುಮಾನ ಇದೆ. ಬೆಂಕಿ ಇರುವ ಕಾರಣ ಮೊದಲ ಮಹಡಿಗೆ ಹೋಗಲು ಸಾಧ್ಯವಾಗ್ತಿಲ್ಲ. ಬೆಂಕಿ ಸಂಪೂರ್ಣ ಆರಿಸಿದ ಬಳಿಕವಷ್ಟೆ ಸಾವಿನ ನಿಖರ ಮಾಹಿತಿ ಸಿಗಲಿದೆ.
ಹೊಗೆಯಿಂದಾಗಿ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆಗೂ ಕಷ್ಟವಾಗುತ್ತಿದ್ದು, ಪ್ಲಾಸ್ಟಿಕ್ ವಸ್ತು ಇರೋದರಿಂದ ಕಟ್ಟಡದ ಒಳಗೆ ದಟ್ಟವಾಗಿ ಹೊಗೆ ಆವರಿಸಿಕೊಂದಿದೆ. ಒಳಗೆ ಹೋಗಲು ಅಗ್ನಿಶಾಮಕ ಸಿಬ್ಬಂದಿಗೆ ಬಹಳ ಕಷ್ಞವಾಗಿತ್ತಿರುವ ಹಿನ್ನೆಲೆಯಲ್ಲಿ ಉಳಿದವರ ಶೋಧಕಾರ್ಯಕ್ಕೆ ಅಡ್ಡಿಯಾಗುತ್ತಿದೆ. ಈ ವರೆಗೆ ಎರಡು ಮೃತದೇಹ ಶಿಫ್ಟ್ ಮಾಡಲಾಗಿದೆ.
ಅಗ್ನಿಶಾಮಕ ಸಿಬ್ಬಂದಿಗಳಿಂದ ಮೃತ ದೇಹ ಹೊರತೆಗೆಯುವ ಕಾರ್ಯ ಮಾಡುತ್ತಿದ್ದು, ಬೆಂಕಿಯಲ್ಲಿ ಸಿಲುಕಿರುವ ಇನ್ನುಳಿದಿರುವವರಿಗಾಗಿ ಹುಡುಕಾಟ ಆರಂಭಿಸಿರುವ ಅಗ್ನಿ ಶಾಮಕ ದಳ ಸಿಬ್ಬಂದಿ, ದಟ್ಟವಾದ ಹೊಗೆಯ ಮಧ್ಯೆಯೂ ಆಕ್ಸಿಜನ್ ಸಿಲಿಂಡರ್ ಧರಿಸಿ ಒಳಗೆ ಹೋಗ್ತಿ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಇದು ಸಿಲಿಂಡರ್ ಸ್ಫೋಟನಾ ಅಥವಾ ಶಾರ್ಟ್ ಸರ್ಕ್ಯೂಟ್ ? ಎಂಬಾ ತನಿಖೆ ನಡೆಯುತ್ತಿದೆ. ಸ್ಥಳದಲ್ಲಿ ಹಲಸೂರುಗೇಟ್ ಪೊಲೀಸರು ತನಿಖೆ ಕೈಗೊಂಡಿದ್ದು, ಬೆಂಕಿ ಅವಘಡಕ್ಕೆ ಕಾರಣ ಏನು ಅನ್ನುವ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.
