Home » Ayodhya: ಕರ್ನಾಟಕದಿಂದ ಅಯೋಧ್ಯೆಗೆ ಮತ್ತೊಂದು ಕೊಡುಗೆ – 30 ಕೋಟಿ ರೂ. ವಜ್ರಖಚಿತ ರಾಮನ ವಿಗ್ರಹ ಕಾಣಿಕೆ ಕೊಟ್ಟ ಅನಾಮದೇಯ ವ್ಯಕ್ತಿ !!

Ayodhya: ಕರ್ನಾಟಕದಿಂದ ಅಯೋಧ್ಯೆಗೆ ಮತ್ತೊಂದು ಕೊಡುಗೆ – 30 ಕೋಟಿ ರೂ. ವಜ್ರಖಚಿತ ರಾಮನ ವಿಗ್ರಹ ಕಾಣಿಕೆ ಕೊಟ್ಟ ಅನಾಮದೇಯ ವ್ಯಕ್ತಿ !!

0 comments

Ayodhya: ಕರ್ನಾಟಕದ ದಾನಿ ಒಬ್ಬರು ಅಯೋಧ್ಯೆಯ ರಾಮಮಂದಿರಕ್ಕೆ ಬರೋಬ್ಬರಿ 30 ಕೋಟಿ ಬೆಲೆಬಾಳುವಂತಹ ವಜ್ರ ಖಚಿತವಾದ ಬಾಲರಾಮನ ವಿಗ್ರಹವನ್ನು ದೇಣಿಗೆ ನೀಡಿದ್ದಾರೆ. ಸದ್ಯದಲ್ಲೇ ಅಯೋಧ್ಯೆಯ ರಾಮಮಂದಿರದಲ್ಲಿ ಈ ವಿಗ್ರಹ ಪ್ರತಿಷ್ಠಾಪನೆಯಾಗಲಿದೆ.

ಹೌದು, ಅನಾಮಧೇಯ ಭಕ್ತರೊಬ್ಬರು ದಾನ ಮಾಡಿದ 10 ಅಡಿ ಎತ್ತರದ, ಚಿನ್ನದ ವರ್ಣದ, ರತ್ನಖಚಿತ ಶ್ರೀರಾಮನ ವಿಗ್ರಹವು ದೇವಾಲಯದ ಆವರಣದಲ್ಲಿ ಶೀಘ್ರದಲ್ಲೇ ಪ್ರತಿಷ್ಠಾಪನೆಯಾಗಲಿದೆ. ಈ ಪ್ರತಿಮೆಯನ್ನು ಕರ್ನಾಟಕದ ಭಕ್ತರೊಬ್ಬರು ದಾನ ಮಾಡಿದ್ದು, ಇದು ನಿನ್ನೆ (ಡಿ.23) ಅಯೋಧ್ಯೆಯನ್ನು ತಲುಪಿದೆ. 

ದಕ್ಷಿಣ ಭಾರತದ ಸಾಂಪ್ರದಾಯಿಕ ಶಿಲ್ಪಕಲೆ ತಂತ್ರಗಳನ್ನು ಬಳಸಿ ರಚಿಸಲಾದ ಈ ಪ್ರತಿಮೆಯ ಮೌಲ್ಯ ಅಂದಾಜು ₹25-30 ಕೋಟಿ. ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಸದಸ್ಯ ಡಾ. ಅನಿಲ್ ಮಿಶ್ರಾ, ದಾನಿಯ ಗುರುತು ಇನ್ನೂ ತಿಳಿದಿಲ್ಲ ಎಂದು ಹೇಳಿದ್ದಾರೆ. ಇದರ ಅರ್ಥ ಇದನ್ನು ನೀಡಿರುವವರು ಯಾರು ಎನ್ನುವುದು ಇದುವರೆಗೆ ತಿಳಿದುಬಂದಿಲ್ಲ! “ಪ್ರತಿಮೆಯ ತೂಕವನ್ನು ಅಳೆಯಲಾಗುತ್ತಿದೆ, ಆದರೂ ಪ್ರಾಥಮಿಕ ಅಂದಾಜಿನ ಪ್ರಕಾರ ಅದು ಸುಮಾರು ಐದು ಕ್ವಿಂಟಾಲ್‌ಗಳಷ್ಟಿದೆ. ಸಂಪೂರ್ಣ ವಿವರಗಳನ್ನು ಶೀಘ್ರದಲ್ಲೇ ಹಂಚಿಕೊಳ್ಳಲಾಗುವುದು” ಎಂದಿದ್ದಾರೆ ಡಾ. ಅನಿಲ್ ಮಿಶ್ರಾ.

You may also like