Home » HSRP Number plate: ವಾಹನ ಮಾಲಿಕರಿಗೆ ಗುಡ್ ನ್ಯೂಸ್ – HSRP ನಂಬರ್ ಪ್ಲೇಟ್ ಕುರಿತು ರಾಜ್ಯ ಸರ್ಕಾರದಿಂದ ಮತ್ತೊಂದು ಹೊಸ ನಿರ್ಧಾರ ಪ್ರಕಟ !!

HSRP Number plate: ವಾಹನ ಮಾಲಿಕರಿಗೆ ಗುಡ್ ನ್ಯೂಸ್ – HSRP ನಂಬರ್ ಪ್ಲೇಟ್ ಕುರಿತು ರಾಜ್ಯ ಸರ್ಕಾರದಿಂದ ಮತ್ತೊಂದು ಹೊಸ ನಿರ್ಧಾರ ಪ್ರಕಟ !!

0 comments

HSRP Number plate: ಹೈಸೆಕ್ಯೂರಿಟಿ ನಂಬರ್ ಪ್ಲೇಟ್ ಅಳವಡಿಸಲು ಕರ್ನಾಟಕ ರಾಜ್ಯ ಸಾರಿಗೆ ಇಲಾಖೆ ನೀಡಿರುವ ಗಡುವು ಫೆಬ್ರವರಿ 17 ಅಂತ್ಯವಾಗಲಿದ್ದು, ಇನ್ನೂ HSRP ನಂಬರ್ ಪ್ಲೇಟ್ ಅಳವಡಿಸದವರು ದುಬಾರಿ ದಂಡ ಪಾವತಿಸಬೇಕಾಗುತ್ತದೆ. ಆದ ಕುರಿತಂತೆ ಇದೀಗ ಬಿಗ್ ಅಪ್ಡೇಟ್ ಒಂದು ಹೊರಬಿದ್ದಿದ್ದು ಇದು ವಾಹನ ಮಾಲಿಕರಗೆ ನೆಮ್ಮದಿ ತಂದಿದೆ.

HSRP ನಂಬರ್ ಪ್ಲೇಟ್(HSRP Number  plate)ಅಳವಡಿಕೆಗೆ ಈಗಾಗಲೇ ಫೆಬ್ರವರಿ 17 ಕೊನೆಯ ದಿನಾಂಕ ಎಂದು ನಿಗದಿ ಆಗಿದೆ. ಆದರೀಗ ಕೊನೇ ಕ್ಷಣಕ್ಕೆ ರಾಜ್ಯ ಸರ್ಕಾರ ಮನಸ್ಸು ಬದಲಾಯಿಸಿದ್ದು, ನಂಬರ್ ಪ್ಲೇಟ್ ಅಳವಡಿಕೆಯ ಕೊನೆಯ ದಿನಾಂಕವನ್ನು ಮುಂದೂಡಲು ಚಿಂತನೆ ನಡೆಸಿದೆಯಂತೆ.

ಹೌದು, ಫೆಬ್ರವರಿ 17 ಕೊನಯ ದಿನಾಂಕ ಆಗಿದ್ದು, ಈ ದಿನ ಹತ್ತಿರಾಗುತ್ತಿರುವ ಕಾರಣ ಜನರು ಕೊನೇ ಅವಧಿಯಲ್ಲಿ ಹೆಚ್ಚೆಚ್ಚು ರಿಜಿಸ್ಟರ್ ಮಾಡಲು ಮುಂದಾಗುತ್ತಿದ್ದು, ಅಪ್ಲೋಡ್ ಸಮಸ್ಯೆಯಾಗಲಿದೆ. ಈ ಹಿನ್ನೆಲೆಯಲ್ಲಿ ಈಗ ಪುನಃ ದಿನಾಂಕ ವಿಸ್ತರಣೆಗೆ ಒತ್ತಡ ಕೇಳಿ ಬಂದಿದ್ದು, ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ(Ramalinga Reddy) ತಿಳಿಸಿದ್ದಾರೆ. ಇದರಿಂದ ಇನ್ನು ನಂಬರ್ ಪ್ಲೇಟ್ ಅಳವಡಿಸದವರಿಗೆ ಸದ್ಯದಲ್ಲೆ ಗುಡ್ ನ್ಯೂಸ್ ಸಿಗಲಿದೆ.

HSRP ನಂಬರ್ ಪ್ಲೇಟ್ ಪಡೆಯುವುದು ಹೇಗೆ?
ಮೊದಲಿಗೆ https://transport.karnataka.gov.in ಅಥವಾ www.siam.in ಗೆ ಭೇಟಿ ನೀಡಿ ನಂತರ Book HSRP ನ್ನು ಕ್ಲಿಕ್‌ ಮಾಡಿ.
• ವಾಹನ ತಯಾರಕರನ್ನು ಆಯ್ಕೆ ಮಾಡಿ
• ವಾಹನದ ಮೂಲ ವಿವರ ಭರ್ತಿ ಮಾಡಿ
• ಡೀಲರ್‌ ಸ್ಥಳವನ್ನು ಆಯ್ಕೆ ಮಾಡಿ (HSRP ಅಳವಡಿಕೆಗೆ ನಿಮ್ಮ ಅನುಕೂಲಕ್ಕೆ ತಕ್ಕಂತೆ)
• HSRP ಶುಲ್ಕವನ್ನು ನಗದು ರೂಪದಲ್ಲಿ ಪಾವತಿ ಮಾಡಲು ಅವಕಾಶವಿಲ್ಲ, ಹಾಗಾಗಿ ಆನ್‌ಲೈನ್‌ನಲ್ಲಿ ಪಾವತಿಸಿ.
• ಆವಾಗ, ವಾಹನ ಮಾಲೀಕರ ಮೊಬೈಲ್‌ ಸಂಖ್ಯೆಗೆ ಒಟಿಪಿ ರವಾನಿಸಲಾಗುವುದು.
• ನಿಮಗೆ ಯಾವಗ ಸೂಕ್ತ ಅನಿಸುತ್ತದೆಯೋ ಅದಕ್ಕೆ ತಕ್ಕಂತೆ HSRP ಅಳವಡಿಕೆಯ ದಿನಾಂಕ ಮತ್ತು ಸಮಯವನ್ನು ಆಯ್ಕೆ ಮಾಡಿ
• ನಂತರ ನಿಮ್ಮ ವಾಹನದ ಯಾವುದೇ ತಯಾರಕ/ ಡೀಲರ್‌ ಸಂಸ್ಥೆಗೆ ಭೇಟಿ ನೀಡಿ.

You may also like

Leave a Comment