Home » Train accident: ಒಡಿಶಾದಲ್ಲಿ ಮತ್ತೊಂದು ರೈಲು ಅವಘಡ: ಗೂಡ್ಸ್ ರೈಲಿನಡಿಗೆ ಡಿಕ್ಕಿ 6 ಜನರ ದುರ್ಮರಣ

Train accident: ಒಡಿಶಾದಲ್ಲಿ ಮತ್ತೊಂದು ರೈಲು ಅವಘಡ: ಗೂಡ್ಸ್ ರೈಲಿನಡಿಗೆ ಡಿಕ್ಕಿ 6 ಜನರ ದುರ್ಮರಣ

by ಹೊಸಕನ್ನಡ
0 comments
Train accident

Train accident: ಭುವನೇಶ್ವರ: ಒಡಿಶಾದಲ್ಲಿ ಕಳೆದ ಶುಕ್ರವಾರ ನಡೆದಿದ್ದ ಭೀಕರ ತ್ರಿವಳಿ ರೈಲು ದುರಂತ ಮನದಿಂದ ಮಾಸುವ ಮುನ್ನವೇ ಮತ್ತೊಂದು ರೈಲು ದುರಂತ (Train accident) ಇಂದು ಸಂಭವಿಸಿದೆ. ಅದೂ ಮೊನ್ನೆ ನಡೆದ ಘಟನಾ ಸ್ಥಳದ ಸನಿಹವೇ ನಡೆದಿದ್ದು ಆತಂಕಕ್ಕೆ ಕಾರಣವಾಗಿದೆ.

ಅಲ್ಲಿ ಸರಕು ಸಾಗಣೆ ರೈಲೊಂದು ಹರಿದು ಒಟ್ಟು 6 ಕಾರ್ಮಿಕರು ಮೃತಪಟ್ಟು ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಘಟನೆಯು ಇಂದು (ಬುಧವಾರ) ಮಧ್ಯಾಹ್ನ ಒಡಿಶಾದ ಜಾಜ್‌ಪುರ್‌ ಜಿಲ್ಲೆಯ ಜಾಜ್‌ಪುರ್‌ ಕಿಯೋಂಜಾರ್‌ ರೈಲು ನಿಲ್ದಾಣದ ಬಳಿ ನಡೆದಿದೆ.

ಆ ಅಪಘಾತ ಹೇಗಾಗಿತ್ತು ಗೊತ್ತೇ?:
ಇಂದು ದಿಢೀರ್‌ನೇ ಗುಡುಗು-ಮಿಂಚು ಸಹಿತ ಮಳೆ ಪ್ರಾರಂಭವಾಗಿದೆ. ಹೀಗೆ ಮೇಲೆ ಪ್ರಾರಂಭವಾಗಿದ್ದರಿಂದ ಅಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಸರಕು ಸಾಗಣೆ ರೈಲಿನ ಕೆಳಗೆ ಮಳೆಯಿಂದ ಆಶ್ರಯ ಪಡೆಯಲು ನಿಂತಿದ್ದರು. ಈ ವೇಳೆ ಸರಕು ಸಾಗಣೆ ರೈಲು ಚಲಿಸಿದ್ದು, ಅದರ ಕೆಳಗೆ ನಿಂತಿದ್ದ 6 ಕಾರ್ಮಿಕರು ಧಾರುಣವಾಗಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈಗ ಸ್ಥಳಕ್ಕೆ ಹಿರಿಯ ರೈಲ್ವೆ ಅಧಿಕಾರಿಗಳು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ. ಮೃತ ಕಾರ್ಮಿಕರು ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಕಳೆದ ಶುಕ್ರವಾರ ನಡೆದ ಒಡಿಶಾ ಬಾಲಾ ಸೋರ್ ರೈಲು ದುರಂತದಲ್ಲಿ 288 ಜನ ಮೃತಪಟ್ಟು ಸಾವಿರಕ್ಕೂ ಹೆಚ್ಚು ಜನ ಗಾಯಗೊಂಡಿರುವ ಘಟನೆ ಮಾಸುವ ಮುನ್ನವೇ ಈಗ 6 ಜನ ರೈಲು ಅಪಘಾತಕ್ಕೆ ಬಲಿಯಾಗಿದ್ದಾರೆ. ಇದರ ಮಧ್ಯೆ, ಅದೇ ಒಡಿಶಾ ಎರಡು ದಿನಗಳ ಕೆಳಗೆ ಸುಣ್ಣದ ಕಲ್ಲು ಸಾಗಿಸುತ್ತಿದ್ದ ರೈಲು ಹಳಿ ತಪ್ಪಿತ್ತು.

 

ಇದನ್ನು ಓದಿ: Ex CM Yeddyurappa: ಮಾಜಿ ಸಿಎಂ ಯಡಿಯೂರಪ್ಪನವರಿಗೆ ಬಿಗ್ ರಿಲೀಫ್, ಡಿ ನೋಟಿಫಿಕೇಶನ್ ರದ್ದು ಮಾಡಿ ಹೈ ಕೋರ್ಟ್ ಆದೇಶ 

You may also like

Leave a Comment