Home » Mangalore: ದೇಶವಿರೋಧಿ ಪೋಸ್ಟ್; ಹೈಲ್ಯಾಂಡ್ ಆಸ್ಪತ್ರೆಯಿಂದ ವೈದ್ಯೆ ವಜಾ; , ಎಫ್‌ಐಆ‌ರ್ ದಾಖಲು!

Mangalore: ದೇಶವಿರೋಧಿ ಪೋಸ್ಟ್; ಹೈಲ್ಯಾಂಡ್ ಆಸ್ಪತ್ರೆಯಿಂದ ವೈದ್ಯೆ ವಜಾ; , ಎಫ್‌ಐಆ‌ರ್ ದಾಖಲು!

0 comments

Mangaluru: ದೇಶ ವಿರೋಧಿ ಪೋಸ್ಟ್‌ವೊಂದನ್ನು ಜಾಲತಾಣದಲ್ಲಿ ಹಾಕಿದ ಆರೋಪದಲ್ಲಿ ತೀವ್ರ ಟೀಕೆಗೆ ಒಳಗಾಗಿದ್ದ ಮಹಿಳಾ ವೈದ್ಯೆಯನ್ನು ನಗರದ ಹೈಲ್ಯಾಂಡ್‌ ಆಸ್ಪತ್ರೆ ಸೇವೆಯಿಂದ ತೆರವು ಮಾಡಿದೆ. ಹಿಂದುಗಳ ಬಗ್ಗೆ ಮತ್ತು ದೇಶದ ವಿರುದ್ಧ ಪೋಸ್ಟ್‌ ಮಾಡಿರುವ ವೈದ್ಯೆ ಅಫೀಫ ಫಾತೀಮ ಎಂಬ ಮಹಿಳಾ ವೈದ್ಯೆಯ ವಿರುದ್ಧ ಕ್ರಮಕ್ಕೆ ಆಗ್ರಹ ಹೆಚ್ಚಾದಂತೆ ಹೈಲ್ಯಾಂಡ್‌ ಆಸ್ಪತ್ರೆಯ ಆಡಳಿತ ಮಂಡಳಿ ಅಫೀಫಾ ಅವರನ್ನು ಆಸ್ಪತ್ರೆಯಿಂದ ವಜಾಗೊಳಿಸಿದೆ.

ಅಲ್ಲದೇ ವಿವಾದಾತ್ಮ ಪೋಸ್ಟ್‌ ಮಾಡಿದ ಹಿನ್ನೆಲೆಯಲ್ಲಿ ಹೈಲ್ಯಾಂಡ್‌ ಆಸ್ಪತ್ರೆ ಹೆಚ್‌.ಆರ್‌ ಅಧಿಕಾರಿ ಮಹಮ್ಮದ್‌ ಅಸ್ಲಾಂ ಅವರು ಅಫೀಫಾ ವಿರುದ್ಧ ಪಾಂಡೇಶ್‌ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲು ಮಾಡಿದ್ದು, ಈಕೆಯ ಮೇಲೆ ಬಿಎನ್‌ಎಸ್‌ ಕಲಂ ಪ್ರಕಾರ, 196(1)(a), 353(2) ಅಡಿಯಲ್ಲಿ ಎಫ್‌ಐಆರ್‌ ದಾಖಲು ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

You may also like