Home » Anubanda-2024: ಮೈಸೂರು ಅರಮನೆಗೆ ಬರೋ ಕರೆಂಟ್ ಬಿಲ್ ಎಷ್ಟು? ಯದುವೀರ್ ಒಡೆಯರ್ ಹೇಳಿದ್ದೇನು?

Anubanda-2024: ಮೈಸೂರು ಅರಮನೆಗೆ ಬರೋ ಕರೆಂಟ್ ಬಿಲ್ ಎಷ್ಟು? ಯದುವೀರ್ ಒಡೆಯರ್ ಹೇಳಿದ್ದೇನು?

0 comments

Anubanda -2024: ಕಲರ್ಸ್​ ಕನ್ನಡದ ಅನುಬಂಧ ಅವಾರ್ಡ್ಸ್(Anubanda-2024) ಸದ್ಯ ಫುಲ್ ಮೇಮಸ್ ಆಗಿದೆ. ಒಂದು ಚಾನೃಲ್ ನ ಎಲ್ಲಾ ಕಲಾವಿದರು ಒಂದೆಡೆ ಸೇರುವ ಹಬ್ಬವಿದು. ಇದರಲ್ಲಿ ಹಿರಿತರೆ ಹಾಗೂ ಕಿರುತೆರೆಯ ತಾರೆಯರೆಲ್ಲೂ ಭಾಗವಹಿಸುತ್ತಾರೆ. ಅಲ್ಲದೆ ಸಮಾಜದಲ್ಲಿ ಗುರುತಿಸಿಕೊಂಡ, ಸಾಧನೆಗೈದ ಗಣ್ಯಾತಿಗಣ್ಯರೂ ಪಾಲ್ಗೊಳ್ಳುತ್ತಾರೆ. ಅಂತೆಯೇ ಈ ಸಲದ ಅನುಬಂಧದಲ್ಲಿ ಮೈಸೂರು ಮಹಾರಾಜ ಯದುವೀರ್ ಕೃಷ್ಣದತ್ತ ವಡೆಯರ್ ಅವರು ಭಾಗವಹಿಸಿದ್ದಾರೆ.

ಹೌದು, ಮೈಸೂರು ರಾಜವಂಶಸ್ಥ(Mysore Kingdom) ಹಾಗೂ ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್(Yaduveer Wadiyar) ಕೂಡಾ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಕಾರ್ಯಕ್ರಮದ ನಿರೂಪಣೆ ಮಾಡುತ್ತಿದ್ದ ಸೃಜನ್‌ ಲೋಕೇಶ್‌, ಯದುವೀರ್‌ ಅವರನ್ನು ವೇದಿಕೆಗೆ ಅದ್ಧೂರಿಯಾಗಿ ಬರಮಾಡಿಕೊಂಡರು. ಈ ವೇಳೆ ತರ್ಲೆ ಪ್ರಶ್ನೆಗಳನ್ನು ಕೇಳಿದ್ದು, ಮಹಾರಾಜರೂ ಜಾಣ ಉತ್ತರ ನೀಡಿದ್ದು ಎಲ್ಲರಿಗೂ ಒಳ್ಳೆಯ ಮನರಂಜನೆ ನೀಡಿತು.

ಯಸ್, ಸೃಜನ್ ಲೋಕೇಶ್ ಅವರು ರಾಜರಿಗೆ ಮೊದಲನೆಯದಾಗಿ ಅರಮನೆಯ ಕರೆಂಟ್​ ಬಿಲ್​ ಎಷ್ಟು ಬರುತ್ತದೆ ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಜಾಣ್ಮೆಯಿಂದ ಉತ್ತರಿಸಿರೋ ಯದುವೀರ್​ ಅವರು ನಿಜವಾಗಿಯೂ ನನಗೆ ಗೊತ್ತಿಲ್ಲ ಎಂದಿದ್ದಾರೆ.

ಅಲ್ಲದೆ ರಾಜ ರಾಣಿ ಜಗಳ ಮಾಡಿದಾಗ ಮೊದಲು ಯಾರು ಸಾರಿ ಕೇಳುತ್ತಾರೆ ಎಂಬ ಪ್ರಶ್ನೆಗೆ ಉತ್ತರಿಸುವ ಯದುವೀರ್‌ ಒಡೆಯರ್‌ ಸಾಮಾನ್ಯವಾಗಿ ನಾನೇ ಸಾರಿ ಕೇಳುತ್ತೇನೆ ಎಂದು ನಗೆ ಚಟಾಕಿ ಹಾರಿಸಿದ್ದಾರೆ. ಬಳಿಕ ಮನೆಯಲ್ಲಿ ರಾತ್ರಿ ಉಳಿದ ಅನ್ನದಿಂದ ರಾಣಿಯವರು ಚಿತ್ರಾನ್ನ ಮಾಡಿ ಬಡಿಸಿದ್ದಾರಾ? ಎಂದಿದ್ದಕ್ಕೆ ಯದುವೀರ್‌ ಒಡೆಯರ್‌, ಖಂಡಿತಾ.. ಎಲ್ಲರ ಮನೆಯಲ್ಲಿ ಆಗುವಂತೆ ನಮ್ಮ ಮನೆಯಲ್ಲೂ ನಡೆಯುತ್ತದೆ ಎಂದಿದ್ದಾರೆ.

You may also like

Leave a Comment