Home » ಅನುಭವ ಮಂಟಪ ಹಿಂದೂಗಳಿಗೆ ಸೇರಲಿ -ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ

ಅನುಭವ ಮಂಟಪ ಹಿಂದೂಗಳಿಗೆ ಸೇರಲಿ -ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ

0 comments

ಹುಕ್ಕೇರಿ (ಬೆಳಗಾವಿ ಜಿಲ್ಲೆ): ‘ಬಸವಕಲ್ಯಾಣದಲ್ಲಿರುವ ಪೀರ್‌ ಪಾಷಾ ಬಂಗಲೆ ಬಸವಣ್ಣನವರು ಸ್ಥಾಪಿಸಿದ ಮೂಲ ‘ಅನುಭವ ಮಂಟಪ’ವಾಗಿದೆ. ಅದು ಹಿಂದೂಗಳಿಗೆ ಸೇರಲಿ’ ಎಂದು ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಇಲ್ಲಿ ಪತ್ರಕರ್ತರೊಂದಿಗೆ ಶುಕ್ರವಾರ ಮಾತನಾಡಿದ ಅವರು,‘ಸರ್ಕಾರವು ಕೂಡಲೆ ಮಧ್ಯಪ್ರವೇಶಿಸಿ ಮುಸ್ಲಿಮರೊಂದಿಗೆ ಸೌಹಾರ್ದದಿಂದ ಚರ್ಚಿಸಿ ಆ ಮೂಲ ಅನುಭವ ಮಂಟಪದ ಸ್ಥಳವನ್ನು ಹಿಂದೂಗಳಿಗೆ ಹಸ್ತಾಂತರಿಸಬೇಕು’ಎಂದು ಒತ್ತಾಯಿಸಿದರು.
ಅಖಿಲ ಭಾರತ ವೀರಶೈವ ಮಹಾಸಭಾದ ಮುಖಂಡ ಪ್ರದೀಪ ಕಂಕಣವಾಡಿ, ‘ಬಸವಣ್ಣನವರು ರಚಿಸಿದ ‘ಅನುಭವ ಮಂಟಪ’ ವಿಶ್ವದ ಪ್ರಥಮ ಸಂಸತ್ತಾಗಿದೆ. ಶರಣರ ನಾಡನ್ನು ನಿಜಾಮರು ಕೈವಶ ಮಾಡಿಕೊಂಡಿರುವುದು ನಮ್ಮ ದುರಂತ. ಪೀರ್‌ ಪಾಷಾ ಬಂಗಲೆಯನ್ನು ಸರ್ಕಾರದ ವಶಕ್ಕೆ ಪಡೆದು ಸ್ಮಾರಕ ಮಾಡಬೇಕು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಮ್ಮ ಬೇಡಿಕೆಗೆ ಸ್ಪಂದಿಸದಿದ್ದರೆ ಜೂನ್ 12ರಂದು ಮಠಾಧೀಶರ ನೇತೃತ್ವದಲ್ಲಿ ಹೋರಾಟ ಮಾಡಲಾಗುವುದು’ ಎಂದು ತಿಳಿಸಿದರು.

ಓದಿ… ಬಸವಣ್ಣನ ಕರ್ಮಭೂಮಿ ಬಸವಕಲ್ಯಾಣದಲ್ಲೂ ಮಸೀದಿ ವಿವಾದ: ಅನುಭವ ಮಂಟಪದ ಕುರುಹು ಪತ್ತೆ

You may also like

Leave a Comment