Home » ಅನ್ಯಕೋಮಿನ ಯುವಕರ ಜತೆ ಹಿಂದೂ ಯುವತಿ | ತಡೆಯೊಡ್ಡಿದ್ದ ಮೂವರ ಬಂಧನ

ಅನ್ಯಕೋಮಿನ ಯುವಕರ ಜತೆ ಹಿಂದೂ ಯುವತಿ | ತಡೆಯೊಡ್ಡಿದ್ದ ಮೂವರ ಬಂಧನ

0 comments

ಬಂಟ್ವಾಳ: ಅನ್ಯಕೋಮಿನ ಯುವಕರ ಜೊತೆ ತಿರುಗಾಡುತ್ತಿದ್ದ ಹಿಂದೂ ಯುವತಿಯರನ್ನು ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ದಾಳಿ ನಡೆಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ಕಾರಿಂಜದಲ್ಲಿ ಆ.26 ರಂದು ನಡೆದಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವಕನೋರ್ವ ನೀಡಿದ ದೂರಿನಂತೆ ಮೂವರನ್ನು ಪುಂಜಾಲಕಟ್ಟೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಮಂಗಳೂರು ಎಜೆ ಆಸ್ಪತ್ರೆಯಲ್ಲಿ ಅಂತಿಮ ವರ್ಷದ ಪ್ಯಾರ ಮೆಡಿಕಲ್ ವಿದ್ಯಾಭ್ಯಾಸವನ್ನು ಮಾಡುತ್ತಿರುವ ಮೂರು ಮಂದಿ ಯುವಕರು ಹಾಗೂ ಒಬ್ಬರು ಯುವತಿಯರು ಟ್ರಿಪ್ ಗೆಂದು ದ್ವಿಚಕ್ರ ವಾಹನದಲ್ಲಿ ಮಂಗಳೂರಿನಿಂದ ಬಂಟ್ವಾಳ ತಾಲೂಕು ಕಾವಳಮುಡೂರು ಗ್ರಾಮದ ಕಾರಿಂಜೇಶ್ವರ ದೇವಸ್ಥಾನಕ್ಕೆ ಬಂದು ದೇವಸ್ಥಾನದಲ್ಲಿ ಪೋಟೋಗಳನ್ನು ತೆಗೆದು ಬಳಿಕ ಮರಳಿ ದೇವಸ್ಥಾನದಿಂದ ಮನೆಗೆ ಹೋಗುವಾಗ ದೇವಸ್ಥಾನದ ಕೆರೆಯ ಬಳಿ ಸುಮಾರು 5 ಮಂದಿ ಅಪರಿಚಿತ ಯುವಕರ ಗುಂಪೊಂದು ಗೆಳತಿ ಗೆಳೆಯರನ್ನು ತಡೆದು ನಿಲ್ಲಿಸಿ ಪ್ರಶ್ನಿಸಿದ್ದು, 5 ಮಂದಿ ಅಪರಿಚಿತ ಯುವಕರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಯುವಕನೊಬ್ಬ ದೂರು ನೀಡಿದ್ದು,ಅದರಂತೆ ಮೂವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

You may also like

Leave a Comment