Home » APL BPL Card: ಎಪಿಎಲ್‌ಗೆ ಬದಲಾದ ಅರ್ಹರಿಗೆ ಮತ್ತೆ ಬಿಪಿಎಲ್‌ ಕಾರ್ಡ್‌

APL BPL Card: ಎಪಿಎಲ್‌ಗೆ ಬದಲಾದ ಅರ್ಹರಿಗೆ ಮತ್ತೆ ಬಿಪಿಎಲ್‌ ಕಾರ್ಡ್‌

0 comments
Ration Card

APL BPL Card: ಅನರ್ಹ ಬಿಪಿಎಲ್‌ ಕಾರ್ಡ್‌ದಾರರನ್ನು ಪತ್ತೆ ಮಾಡಿ ಎಪಿಎಲ್‌ ಕಾರ್ಡ್‌ ನೀಡಲು ಆಹಾರ ಇಲಾಖೆ ಮುಂದಾಗಿದೆ. ಇಲಾಖೆಯ ಪ್ರಸ್ತಾವಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅನುಮೋದನೆ ನೀಡಿದ್ದಾರೆ.

ರಾಜ್ಯದಲ್ಲಿ ಈಗಾಗಲೇ 7,76,206 ಪಡಿತರ ಚೀಟಿಗಳು ಅನರ್ಹವೆಂದು ಕೇಂದ್ರ ಸರಕಾರ ಗುರುತು ಮಾಡಿದ್ದು, ರಾಜ್ಯ ಸರಕಾರದ ಕುಟುಂಬ ತಂತ್ರಾಂಶದ ಪ್ರಕಾರ 13,87,651 ಅನರ್ಹ ಪಡಿತರ ಚೀಟಿಗಳಿದೆ. ಇಂತಹ ಅನರ್ಹ ಚೀಟಿಗಳನ್ನು ಬಿಪಿಎಲ್‌ ಬದಲಿಗೆ ಎಪಿಎಲ್‌ ಆಗಿ ಪರಿವರ್ತನೆ ಮಾಡುವುದು. ಒಂದು ವೇಳೆ ಅರ್ಹರ ಕಾರ್ಡ್‌ ಎಪಿಎಲ್‌ಗೆ ಬದಲಾಗಿದ್ದಲ್ಲಿ 45 ದಿನದೊಳಗೆ ಅಗತ್ಯ ದಾಖಲೆ ಸಹಿತ ತಹಶೀಲ್ದಾರ್‌ಗೆ ಮನವಿ ಸಲ್ಲಿಸಬೇಕು. ದಾಖಲೆಗಳನ್ನು ಪರಿಶೀಲನೆ ಮಾಡಿ ಅರ್ಹರಿದ್ದಲ್ಲಿ ಅಂತವರಿಗೆ ಬಿಪಿಎಲ್‌ ಕಾರ್ಡ್‌ ನೀಡಲಾಗವುದು.

ಹೊಸದಾಗಿ ಪಡಿತರ ಚೀಟಿಗೆ ಈಗಾಗಲೇ ಸಲ್ಲಿಕೆಯಾಗಿರುವ 2.96ಲಕ್ಷ ಅರ್ಜಿ ವಿಲೇವಾರಿ ಮಾಡುವವರೆಗೆ ಬಿಪಿಎಲ್‌ ಗೆ ಹೊಸದಾಗಿ ಅರ್ಜಿ ಆಹ್ವಾನಿಸಬಾರದು ಎಂದು ಹೇಳಲಾಗಿದೆ.

You may also like