

ಅಳದಂಗಡಿ: ಬಳಂಜ ಪ್ರತ್ಯೇಕ ಕೃಷಿ ಪತ್ತಿನ ಸಹಕಾರ ಸಂಘದ ಹೋರಾಟ ಸಮಿತಿ ಬಳಂಜ ನಾಲ್ಕೂರು ತೆಂಕಕಾರಂದುರು ಗ್ರಾಮಗಳ ರೈತ ಸದಸ್ಯರುಗಳು ಬಳಂಜದಲ್ಲಿ ಪ್ರತ್ಯೇಕ ಕೃಷಿ ಪತ್ತಿನ ಸಹಕಾರ ಸಂಘವನ್ನು ರಚಿಸುವುದಾಗಿ ಕಳೆದ ಸಹಕಾರಿ ಚುನಾವಣೆಯಲ್ಲಿ ವಾಗ್ದಾನ ನೀಡಿ ಅಧಿಕಾರಕ್ಕೆ ಬಂದ ನಂತರ ಅಳದಂಗಡಿ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯು ಇದುವರೆಗೂ ಯಾವುದೇ ಪ್ರಕ್ರಿಯೆಯನ್ನು ಪ್ರಾರಂಭಿಸದೇ ಇರುವುದನ್ನು ವಿರೋಧಿಸಿ ಜ. 23ರಂದು ಬಳಂಜ ನಾಲ್ಕೂರು ತೆಂಕಕಾರಂದುರು ಗ್ರಾಮಗಳ ರೈತರು ಒಟ್ಟು ಸೇರಿ ಒಂದು ತಿಂಗಳ ಒಳಗೆ ನಮಗೆ ಉತ್ತರ ಕೊಡಬೇಕೆಂದು ಅಳದಂಗಡಿ ಕೃಷಿ ಪತ್ತಿನ ಸಹಕಾರ ಸಂಘದ ಸಿ ಇ ಓ ಮೀರಾ ಅವರಿಗೆ ಮನವಿ ನೀಡಲಾಯಿತು.
ಹಿರಿಯ ಮುಖಂಡರುಗಳಾದ ವಿಶ್ವನಾಥ್ ಡೋಂಗ್ರೆ, ಜೆರಾಮ್ ಲೋಬೊ, ರಮಾನಾಥ ಶೆಟ್ರು, ಅರುಣ್ ಹೆಗ್ಡೆ ಜೊಕಿಂ ಕ್ರಾಸ್ತಾ ಅನೆಪಿಲ, ಸುಂದರ ಹೆಗ್ಡೆ, ವಿಕ್ಟರ್ ಕ್ರಾಸ್ತಾ, ವಸಂತ ಸಾಲಿಯಾನ್ ಮಜೇನಿ, ವಸಂತ ಪೂಜಾರಿ ನೀರ್ ಒಲ್ವೇ, ಪುರಂದರ ಪೂಜಾರಿ ಪೇರಾಜೆ, ರವೀಂದ್ರ ಬಿ. ಅಮೀನ್ ಹಾಗೂ ರೈತ ಸದಸ್ಯರು ಹಾಜರಿದ್ದರು.













