Puttur: ಜೇನು ಕೃಷಿಕರಿಗೆ ತೋಟಗಾರಿಕೆ ಇಲಾಖೆಯಿಂದ ಜೇನು ಸಾಕಾಣಿಕೆಗಾಗಿ ಸಹಾಯಧನ ಪಡೆಯಲು ಅವಕಾಶವಿರುತ್ತದೆ. 2025-26ನೇ ಸಾಲಿಗೆ ಜಿಲ್ಲಾ ಪಂಚಾಯತ್ ಹಾಗೂ ರಾಜ್ಯ ವಲಯ ಯೋಜನೆಯಡಿ ‘ಮಧುವನ ಹಾಗೂ ಜೇನು ಸಾಕಾಣಿಕೆ ಕಾರ್ಯಕ್ರಮ’ ಇದರಡಿಯಲ್ಲಿ ಈ ಯೋಜನೆ ಚಾಲ್ತಿಯಲ್ಲಿದೆ.
ಈ ಯೋಜನೆಯಿಂದ ಜೇನು ಪೆಟ್ಟಿಗೆ, ಜೇನು ಕುಟುಂಬ ಹಾಗೂ ಸ್ಟ್ಯಾಂಡ್ ಖರೀದಿಸಿದ್ದರ ಸಲುವಾಗಿ ಸಹಾಯ ಧನ ಪಡೆಯಬಹುದಾಗಿದೆ.
ಮೊದಲಿಗೆ ಜೇನು ತರಬೇತಿ ಕಾರ್ಯಕ್ರಮಕ್ಕೆ ಆಸಕ್ತ ರೈತರು ಇಲಾಖೆಯಲ್ಲಿ ನೋಂದಾಯಿಸಿಕೊಳ್ಳಬೇಕು. ಬಳಿಕ ಜೇನು ಪೆಟ್ಟಿಗೆ ಇತ್ಯಾದಿಗಳ ಸಹಾಯಧನಕ್ಕಾಗಿ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಬೇಕು.
ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಪುತ್ತೂರು (Puttur) ಇವರ ಕಛೇರಿಯನ್ನು ಸಂಪರ್ಕಿಸಬಹುದಾಗಿದೆ.
ಸಂಪರ್ಕ ಸಂಖ್ಯೆ1) ಕಛೇರಿ ದೂರವಾಣಿ ಸಂಖ್ಯೆ: 08251-230905
2) ಸಹಾಯಕ ನಿರ್ದೇಶಕರು: 9449526117
3) ಹಿರಿಯ ಸಹಾಯಕ ತೋಟಗಾರಿಕೆ
9731854527
