7
Intel Corporation: ಅಮೆರಿಕ(America) ಮೂಲದ ಜಾಗತಿಕ ತಂತ್ರಜ್ಞಾನ ಕಂಪನಿ(IT) ಇಂಟೆಲ್ ಕಾರ್ಪೊರೇಶನ್ ಸಂಸ್ಥೆಯ ಮುಖ್ಯ ತಂತ್ರಜ್ಞಾನ ಅಧಿಕಾರಿಯಾಗಿ (CTO) ಬೆಳಗಾವಿ(Belagavi) ಮೂಲದ ಸಚಿನ್ ಕಟ್ಟಿ(Sachin Katti) ನೇಮಕವಾಗಿದ್ದಾರೆ. ನೆಟ್ ವರ್ಕಿಂಗ್ ಚಿಪ್ ಮುಖ್ಯಸ್ಥರಾಗಿದ್ದ ಕಟ್ಟಿ, ಕೃತಕ ಬುದ್ದಿಮತ್ತೆ (AI) ವಿಭಾಗದ ಮುಖ್ಯಸ್ಥರಾಗಿಯೂ ಕೆಲಸ ನಿರ್ವಹಿಸಲಿದ್ದಾರೆ. ಈ ಹಿಂದೆ, ಉಹಾನಾ ಎನ್ನುವ ಸ್ಟಾರ್ಟಪ್ ಕಂಪನಿ ಸ್ಥಾಪಿಸಿದ್ದ ಸಚಿನ್, ಪತ್ನಿ ಸೀಮಾ ಮತ್ತು ಇಬ್ಬರು ಮಕ್ಕಳೊಂದಿಗೆ ಅಮೆರಿಕಾದಲ್ಲಿ ನೆಲೆಸಿದ್ದಾರೆ.
ಇಂಟೆಲ್ ಸಂಸ್ಥೆಯ ಸಿಇಒ ಲಿಪ್-ಬು ಟ್ಯಾನ್ ಅವರು, ಸಂಸ್ಥೆಯ ನಾಯಕತ್ವ ತಂಡದಲ್ಲಿ ಬದಲಾವಣೆ ಮಾಡುತ್ತಿರುವ ಈ ಸಮಯದಲ್ಲಿ ಈ ಮಹತ್ವದ ಬದಲಾವಣೆಯಾಗಿದೆ ಎಂದು ರಾಯಟರ್ಸ್ ಸುದ್ದಿಸಂಸ್ಥೆ ವರದಿ ಮಾಡಿದೆ.
