Home » Tragedy: ಹೆಂಡ್ತಿ ಜೊತೆ ಗಲಾಟೆ: ನಾಲ್ಕು ಪುಟ್ಟ ಮಕ್ಕಳ ಕರೆದುಕೊಂಡು ರೈಲಿಗೆ ಹಾರಿದ ತಂದೆ

Tragedy: ಹೆಂಡ್ತಿ ಜೊತೆ ಗಲಾಟೆ: ನಾಲ್ಕು ಪುಟ್ಟ ಮಕ್ಕಳ ಕರೆದುಕೊಂಡು ರೈಲಿಗೆ ಹಾರಿದ ತಂದೆ

by Mallika
0 comments

Tragedy: ಹೆಂಡತಿ ಜೊತೆ ಜಗಳ ಮಾಡಿಕೊಂಡ ಗಂಡ ತನ್ನ 3 ರಿಂದ 9 ವರ್ಷ ಪ್ರಾಯದ ಒಳಗಿನ ನಾಲ್ಕು ಮಕ್ಕಳನ್ನು ಜೊತೆಗೆ ಕರೆದುಕೊಂಡು ಹೋಗಿ ಚಲಿಸುತ್ತಿದ್ದ ರೈಲಿನ ಮುಂದೆ ಹಾರಿದ್ದು, ಎಲ್ಲರೂ ಸಾವಿಗೀಡಾಗಿದ್ದಾರೆ. ಈ ಘಟನೆ ಹರಿಯಾಣದ ಗುರುಗ್ರಾಮ್‌ನಲ್ಲಿ ನಡೆದಿದೆ.

36 ವರ್ಷದ ಮನೋಜ್‌ ಮೆಹ್ರೋ ಎಂಬಾತ ಮಂಗಳವಾರ ಮಧ್ಯಾಹ್ನ ಫರಿದಾಬಾದ್‌ನ ಬಲ್ಲಭಗಢದಲ್ಲಿ ವೇಗವಾಗಿ ಬರುತ್ತಿದ್ದ ಗೋಲ್ಡನ್‌ ಎಕ್ಸ್‌ಪ್ರೆಸ್‌ ರೈಲಿನ ಮುಂದೆ ತನ್ನ ನಾಲ್ವರು ಗಂಡು ಮಕ್ಕಳನ್ನು ಎಳೆದುಕೊಂಡು ಹಳಿಗಳ ಮೇಲೆ ಹಾರಿದ್ದಾನೆ. ಮಧ್ಯಾಹ್ನ 1 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.

ಬಿಹಾರ ಮೂಲದ ಸೀತಾಮರ್ಹಿಯ ನಿವಾಸಿಯಾಗಿದ್ದ ಮನೋಜ್‌ ಮೆಹ್ರೋ ಕೂಲಿ ಕೆಲಸ ಮಾಡಿ ಬದುಕುತ್ತಿದ್ದ. ಈತ ರೈಲ್ವೆ ಹಳಿಯಿಂದ 300 ಮೀಟರ್‌ ದೂರದಲ್ಲಿ ತನ್ನ ಕುಟುಂಬದ ಜೊತೆ ವಾಸ ಮಾಡುತ್ತಿದ್ದ. ಮಕ್ಕಳನ್ನು ಕರೆದುಕೊಂಡು ಹೊರಡುವ ಸಮಯದಲ್ಲಿ ಆತ ಪತ್ನಿಯ ಬಳಿ ಮಕ್ಕಳನ್ನು ಆಟವಾಡಲು ಉದ್ಯಾನವನಕ್ಕೆ ಕರೆದುಕೊಂಡು ಹೋಗುತ್ತಿರುವುದಾಗಿ ಹೇಳಿದ್ದಾನೆ.

ಘಟನೆಯ ನಂತರ ರೈಲ್ವೆ ಪೊಲೀಸರು ಮಕ್ಕಳ ತಾಯಿಗೆ ಕರೆ ಮಾಡಿದ್ದಾನೆ. ಸ್ಥಳಕ್ಕೆ ಬಂದ ಆಕೆ ಪತಿ ಹಾಗೂ ನಾಲ್ವರು ಗಂಡು ಮಕ್ಕಳ ಶವವನ್ನು ನೋಡಿ ಮೂರ್ಛೆ ಹೋಗಿದ್ದಾಳೆ.

You may also like